ದರ್ಶನ್,ಯಶ್,ಸುದೀಪ್ ಆಯ್ತು..!! ಈಗ ಸುಮಲತಾ ಪರ ಪ್ರಚಾರಕ್ಕೆ ಬರ್ತಾರ ಈ ಸ್ಟಾರ್ ನಟ..!?
ಮಂಡ್ಯದಲ್ಲಿ ಸುಮಲತಾ ಪರ ಬೆಂಬಲ ಸಾಕಷ್ಟು ಕೇಳಿ ಬರುತ್ತಿದೆ… ಸಿಎಂ ಪುತ್ರನಿಗೆ ಮಂಡ್ಯದ ಜನತೆ ಮಣೆ ಹಾಕುತ್ತಾರೋ ಹೇಗೋ ಗೊತ್ತಿಲ್ಲ… ಆದರೆ ಹೋದ ಕಡೆಯಲ್ಲೆಲ್ಲಾ ಸುಮಲತಾ ಅವರಿಗೆ ಮಾತ್ರ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.. ಇದರಿಂದ ಸುಮಲತಾ ಅವರಿಗೂ ಕೂಡ ಧೈರ್ಯ ಬಂದಿದೆ.. ಮಂಡ್ಯ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾಗೆ ಬೆಂಬಲಗಳ ಮಹಾಪೂರವೇ ಹರಿದು ಬರುತ್ತಿದೆ.
ಸ್ಟಾರ್ ನಟರು, ರೈತಸಂಘ ಬೆಂಬಲ ನೀಡಿದ್ದಾರೆ. ಅಷ್ಟೆ ಅಲ್ಲದೆ ಸ್ಯಾಂಡಲ್ ನ ಸ್ವಾರ್ಸ್ ಗಳಾದ ದರ್ಶನ್ ಯಶ್ ಸುದೀಪ್ ಎಲ್ಲರೂ ಕೂಡ ಸುಮಲತಾ ಪರ ಪ್ರಚಾರ ಮಾಡಲು ಸಿದ್ದವಾಗಿದ್ದಾರೆ. ಇದೀಗ ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಸುಮಲತಾಗೆ ಬೆಂಬಲ ನೀಡುತ್ತಾರೆ. ಅವರ ಪರ ಪ್ರಚಾರಕ್ಕೆ ಬರುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಜೊತೆಗೆ ನಟರಾದ ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಕೂಡಾ ಸಪೋರ್ಟ್ ಮಾಡುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಈ ಬಗ್ಗೆ ಸುಮಲತಾ ಪ್ರತಿಕ್ರಿಯೆ ನೀಡುತ್ತಾ, ರಜನೀಕಾಂತ್, ನನ್ನ ಪರ ಪ್ರಚಾರಕ್ಕೆ ಬರುವುದಿಲ್ಲ. ನಾನು ಯಾರಿಗೂ ಪ್ರಚಾರಕ್ಕೆ ಬನ್ನಿ ಎಂದು ವಿನಂತಿ ಮಾಡಿಕೊಂಡಿಲ್ಲ. ಇವೆಲ್ಲಾ ವದಂತಿ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಗೆಲುವಿಗಾಗಿ ಸ್ಯಾಂಡಲ್ವುಡ್ ನ ಕೆಲವು ಸ್ಟಾರ್ಸ್ ಗಳು ಬೆಂಬಲ ಸೂಚಿಸುತ್ತಿದ್ದಾರೆ..
Comments