ಲೋಕಸಮರಕ್ಕೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್.. ಪ್ರಚಾರ ನಿಖಿಲ್ ಪರವೋ, ಸುಮಲತಾ ಪರವೋ..!!

ಈಗಾಗಲೇ ಮಂಡ್ಯ ಅಖಾಡ ಲೋಕಸಮರಕ್ಕೆ ಸಜ್ಜಾಗುತ್ತಿದೆ.. ಸುಮಲತಾ ಅಂಬರೀಶ್ ಪರ ಸ್ಯಾಂಡಲ್ ವುಡ್ ಘಟಾನುಘಟಿಗಳೇ ಭರ್ಜರಿ ಕ್ಯಾಂಪೆನ್ ಮಾಡುತ್ತಿದ್ದಾರೆ.. ಈಗಾಗಲೇ ಸುಮಲತಾ ಪರ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿ ನಮ್ಮ ಬೆಂಬಲ ಯಾವತ್ತಿದ್ದರೂ ಕೂಡ ಸುಮಲತಾ ಅವರಿಗೆ ಎಂದು ತಿಳಿಸಿದ್ದರು, ದೊಡ್ಡಣ್ಣ ರಾಕ್ ಲೈನ್ ವೆಂಕಟೇಶ್ ಮತ್ತು ಪುತ್ರ ಅಭಿಷೇಕ್ ಅಂಬರೀಶ್ ಸುಮಲತಾ ಪರ ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ನಟ ಸುಮಲತಾ ಪರ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ
ಮಂಡ್ಯ ಲೋಕಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಇದೀಗ ಸುದೀಪ್ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ದರ್ಶನ್ ಇರಬೇಕಾದ್ರೆ ನಾನ್ಯಾಕೆ..ಎಲ್ಲವನ್ನು ದರ್ಶನ್ ನೋಡಿಕೊಳ್ಳುತ್ತಾನೆ ಎಂದು ಸುದೀಪ್ ಹೇಳಿದ್ದರು.. ಇದೀಗ ಅವರೇ ಪ್ರಚಾರಕ್ಕೆ ಬರುತ್ತಿರುವುದು ಸುಮಲತಾ ಅವರಿಗೆ ಆನೆ ಬಲ ಬಂದಂತೆ ಆಗಿದೆ.ಸುಮಲತಾ ಅಂಬರೀಶ್ ಪರ ನಟ ಕಿಚ್ಚ ಸುದೀಪ್ ಏಪ್ರಿಲ್ 10 ಹಾಗೂ 11 ರಂದು ಸುಮಲತಾ ಪರವಾಗಿ ಮಳವಳ್ಳಿ ಸೇರಿದಂತೆ ಹಲವೆಡೆ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಈ ಹಿಂದೆ ಸುಮಲತಾ ಅಂಬರೀಶ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದರು. ಅದರಂತೆ ಇದೀಗ ಸುಮಲತಾ ಪ್ರಚಾರಕ್ಕೆ ಬರುತ್ತಿದ್ದಾರೆ.ಇದೀಗ ಸುದೀಪ್ ಅವರೂ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Comments