‘ಅಮ್ಮ ನಡೆದಿದ್ದೆ ದಾರಿ ತಾಕತ್ತಿದ್ರೆ ಕಟ್ಟಾಕ್ರೋ’ ಎಂದ ಅಭಿಷೇಕ್ ಅಂಬರೀಶ್..!!

ಲೋಕಸಮರ ಈಗಾಗಲೇ ಪ್ರಾರಂಭವಾಗಿ ಬಿಟ್ಟಿದೆ. ಮಂಡ್ಯ ಅಖಾಡದತ್ತ ಎಲ್ಲರೂ ಕೂಡ ಒಂದು ಬಾರಿ ತಿರುಗಿ ನೋಡುವಂತೆ ಮಾಡಿದೆ. ಹೈವೋಲ್ಟೇಜ್ ಅಖಾಡವಾಗಿರುವ ಮಂಡ್ಯ ಯಾಕೋ ತಣ್ಣಗೆ ಆಗುವಂತೆ ಕಾಣುತ್ತಿಲ್ಲ.. ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.. ಈಗಾಗಲೇ ದೋಸ್ತಿ ಸರ್ಕಾರದಿಂದ ನಿಖಿಲ್, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿದಿದ್ದಾರೆ .. ಇಬ್ಬರ ಮಧ್ಯೆಯೂ ಕೂಡ ಪ್ರಬಲ ಪೈಪೋಟಿ ಏರ್ಪಟ್ಟಿದೆ..
ಹೈ ವೋಲ್ಟೇಜ್ ಕಣವಾಗಿರುವ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಿರುಸಿನ ಪ್ರಚಾರ ನಡೆಸಿದ್ದಾರೆ.ತಾಯಿಗೆ ಪ್ರಚಾರದಲ್ಲಿ ಜೊತೆಯಾಗಿರುವ ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಸಿನಿಮಾ ಡೈಲಾಗ್ ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಪಿ. ಹೊಸಹಳ್ಳಿಯಲ್ಲಿ ಸುಮಲತಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಭಿಷೇಕ್, ಮಂಡ್ಯ ಜನತೆ ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಬಿಟ್ಟು ಕೊಡುವ ಚಾನ್ಸೇ ಇಲ್ಲ ನೋ ವೇ ಎಂದು ಅಂಬರೀಶ್ ರೀತಿಯಲ್ಲೇ ಡೈಲಾಗ್ ಹೇಳಿದ್ದಾರೆ.
ತದ ನಂತರ ಡಿ ಬಾಸ್ ಡೈಲಾಗ್ ಬೇಕಾ ಎಂದು ಹೇಳುತ್ತಾ, ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಡೈಲಾಗ್ ಹೇಳಿದ್ದಾರೆ. ಅಮ್ಮ ನಡೆದಿದ್ದೇ ದಾರಿ ತಾಕತ್ತಿದ್ರೆ ಕಟ್ಟಾಕ್ರೋ ಎಂದು ಹೇಳಿದ್ದು, ಅವರು ಮಾತನಾಡುವ ಸಂದರ್ಭದಲ್ಲಿ ಅವರು ಹಿಡಿದಿದ್ದ ಮೈಕ್ ಕೈ ಕೊಟ್ಟಿದೆ. ಆಗ ಮೈಕ್ ಪಡೆದುಕೊಂಡ ಸುಮಲತಾ, ಮೊನ್ನೆ ನಾಮಪತ್ರ ಸಲ್ಲಿಕೆ ಮಾಡುವಾಗ ಕರೆಂಟ್ ತೆಗೆದಿದ್ರು, ಇವತ್ತು ಯಾರು ಮೈಕ್ ಕಟ್ ಮಾಡಿದ್ದು ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಸುಮಲತಾ ಅವರ ಸೋಲಿಗಾಗಿ ದೋಸ್ತಿಗಳು ಮಾಸ್ಟರ್ ಫ್ಲ್ಯಾನ್’ಗಳನ್ನು ರಚಿಸುತ್ತಿದ್ದಾರೆ.. ಈಗಾಗಲೇ ಸುಮಲತಾ ಎನ್ನುವ ಹೆಸರಿನ ನಾಲ್ಕು ಜನರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
Comments