ಅಧಿಕೃತವಾಗಿ ಬಿಜೆಪಿ ಗೆ ಸೇರಿದ ಈ ಸ್ಟಾರ್ ನಟಿ..!!
ಈಗಾಗಲೇ ಲೋಕಸಮರದ ಕಾವು ಹೆಚ್ಚಾಗುತ್ತಲೆ ಇದೆ.. ಪಕ್ಷದಿಂದ ಪಕ್ಷಕ್ಕೆ ಬಹುತೇಕ ಶಾಸಕರು ಹಾರಾಟ ನಡೆಸುತ್ತಿದ್ದಾರೆ..ಬಹುಭಾಷಾ ನಟಿ ಹಾಗೂ ರಾಜಕಾರಣಿಯಾದ ಜಯಪ್ರದಾ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.. ನಟಿ ಜಯಪ್ರದಾ ಅವರು 2004 ಮತ್ತು 2009ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ತದ ನಂತರ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.ನಟಿಯಾಗಿರುವ ಈಕೆ ರಾಜಕೀಯ ವಲಯದಲ್ಲಿಯೂ ಕೂಡ ಗುರುತಿಸಿಕೊಂಡಿದ್ದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯಪ್ರದಾ ಸ್ಪರ್ಧಿಸುವುದು ಇನ್ನೂ ಖಚಿತವಾಗಿಲ್ಲ. ಆದರೂ ಕೂಡ ಅವರ ಉಮೇದುವಾರಿಕೆ ಕುರಿತಾಗಿ ಬಿಜೆಪಿ ನಾಯಕರೂ ಇದುವರೆಗೂ ಗೌಪ್ಯತೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಪಕ್ಷಕ್ಕೆ ಆದರದ ಸ್ವಾಗತವನ್ನು ಕೋರಿದ ಬಿಜೆಪಿ ನಾಯಕರಿಗೆ ಜಯಪ್ರದಾ ಅವರು ಅಭಿನಂದನೆ ಸಲ್ಲಿಸಿ ಮಾತನಾಡಿದ್ದಾರೆ.
ಸಿನಿಮಾವಾಗಲಿ ರಾಜಕಾರಣವಾಗಲಿ ನಾನು ನನ್ನ ಕಡೆಯಿಂದ ಏನು ಸಾಧ್ಯನೋ ಅದನ್ನೆ ನೀಡುತ್ತೇನೆ ಎಂದು ಜಯಪ್ರದಾ ಅವರು ತಿಳಿಸಿದ್ದಾರೆ. ಈ ಹಿಂದೆ ನಾನು ಟಿಡಿಪಿ ಮತ್ತು ಸಮಾಜವಾದಿ ಪಕ್ಷಗಳ ಪರವಾಗಿ ಕೆಲಸ ಮಾಡಿದ್ದೇನೆ ಇದೀಗ ನನಗೆ ನರೇಂದ್ರ ಮೋದಿಯಂತಹ ಮಹಾನ್ ನಾಯಕರಿರುವ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಈ ಪಕ್ಷಕ್ಕೆ ಮತ್ತು ದೇಶಕ್ಕೆ ನನ್ನ ಸಂಪೂರ್ಣ ಸೇವೆಯನ್ನು ಮುಡಿಪಾಗಿಡುತ್ತೇನೆ ಎಂದರು.. ಒಟ್ಟಿನಲ್ಲಿ ಬಹುಭಾಷ ನಟಿ ಮೋದಿಯಂತಹ ಮಹಾನ್ ವ್ಯಕ್ತಿಗೆ ಬೆಂಬಲ ನೀಡುವಾಗಿ ತಿಳಿಸಿದ್ದಾರೆ.. ಅಷ್ಟೆ ಅಲ್ಲದೆ ಮತ್ತೊಮ್ಮೆ ಮೋದಿ ಎನ್ನುವ ಮಾತು ಕೂಡ ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ..
Comments