‘ನಮಗೆ ಜೀವ ಬೆದರಿಕೆ ಇದೆ’ ಎಂದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ..!! ಹಾಗಾದ್ರೆ ಕರೆ ಮಾಡಿದ್ಯಾರು..?
ಈಗಾಗಲೇ ಲೋಕ ಸಮರದ ಹವಾ ಜೋರಾಗಿಯೇ ನಡೆಯುತ್ತಿದೆ… ನಾಮಪತ್ರ ಸಲ್ಲಿಸುವವರು ಈಗಾಗಲೇ ಸಲ್ಲಿಸಿ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ.. ಆದರೆ ಮಂಡ್ಯ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಕೂಡ ನಾಮಪತ್ರವನ್ನು ಸಲ್ಲಿಸಿದ್ದಾರೆ..ದೋಸ್ತಿ ಪಕ್ಷದಿಂದ ನಿಖಿಲ್ ಅಖಾಡಕ್ಕೆ ಇಳಿದಿದ್ದರೆ, ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ಇಬ್ಬರು ಕೂಡ ನಾಮಪತ್ರವನ್ನು ಸಲ್ಲಿಸಿ ಕ್ಯಾಂಪೇನ್ ಶುರುಮಾಡಿಕೊಂಡಿದ್ದಾರೆ. ಇತ್ತ ಸುಮಲತಾ ಅವರನ್ನು ಸೋಲಿಸಲು ದೋಸ್ತಿ ಸರ್ಕಾರ ಟೊಂಕ ಕಟ್ಟಿ ನಿಂತಿದೆ.
ನಮ್ಮ ಫೋನ್ ಟ್ರ್ಯಾಪ್ ಮಾಡಲಾಗುತ್ತಿದೆ. ಮಂಡ್ಯ ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಮತದಾರರಿಗೆ ವಿವಿಧ ರೀತಿಯ ಆಮಿಷವೊಡ್ಡಲಾಗುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ಸುಮಲತಾ ಅಂಬರೀಷ್ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಅವರು 'ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ' ಎಂದು ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ. ಸೋಮವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಅವರು ದೂರು ಸಲ್ಲಿಸಿದರು.
ತದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಾಮಪತ್ರ ಸಲ್ಲಿಕೆಯ ಹಿಂದಿನ ದಿನದವರೆಗೂ ಜೆಡಿಎಸ್ ಮುಖಂಡರು ನನಗೆ ಕರೆ ಮಾಡುತ್ತಿದ್ದರು. ನೀವು ಮಂಡ್ಯದಲ್ಲಿ ಅವರ ವಿರುದ್ಧ ಸ್ಪರ್ಧೆ ಮಾಡುವುದು ಸರಿಯಲ್ಲ. ನೀವು ಸ್ಪರ್ಧೆ ಮಾಡಿದರೆ ಏನು ಬೇಕಾದರೂ ಮಾಡುತ್ತಾರೆ ಎಂಬ ಬೆದರಿಕೆ ಒಡ್ಡಿದ್ದರು ಎಂದು ತಿಳಿಸಿದ್ದಾರೆ.. ನಟ ದರ್ಶನ್ ಮನೆಯ ಮೇಲಿನ ಕಲ್ಲು ತೂರಾಟ ಇದೀಗ ಸುಮಲತಾ ಅವರಿಗೆ ಜೀವ ಬೆದರಿಕೆ ಎಲ್ಲವನ್ನು ನೋಡುತ್ತಿದ್ದರೆ ಮೇಲ್ನೋಟಕ್ಕೆ ಇದೆಲ್ಲವೂ ಕೂಡ ಪಿತೂರಿ ಅನಿಸಿದರೂ ಯಾರ ಕೈವಾಡ ಇದೆ ಎಂದು ತಿಳಿಯುತ್ತಿಲ್ಲ.. ಒಟ್ಟಿನಲ್ಲಿ ಲೋಕ ಸಮರ ಮುಗಿಯುವುದರ ಒಳಗೆ ಯಾರ ಯಾರ ಮಧ್ಯೆ ಸಮರ ಏರ್ಪಡುತ್ತದೋ ಗೊತ್ತಿಲ್ಲ…
Comments