'ಡೋಂಟ್ ವರಿ ಮದರ್ ಇಂಡಿಯಾ'..!! ಸುಮಲತಾಗೆ ಹಾಗಂತ ಹೇಳಿದ್ದು ಯಾರು..?
ಈಗಾಗಲೇ ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ.. ನಾಳೆಯೇ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.. ಮಂಡ್ಯ ಲೋಕಸಭಾ ಅಖಾಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.. ಮಂಡ್ಯದಲ್ಲಿ ಸುಮಲತಾ ಪರ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು.. ಇದರಿಂದ ಜೆಡಿಎಸ್ ಕೊಂಚ ಮಟ್ಟಿಗೆ ವಿಚಲಿತವಾಯಿತು..
ಅಂಬರೀಶ್ ನಾಲ್ಕನೇ ತಿಂಗಳ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ, ತದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಬೆಂಬಲ ಸಿಕ್ಕಿರುವುದು ನನಗೆ ಇನ್ನಷ್ಟು ಶಕ್ತಿ ಬಂದಿದೆ. ಬಿಜೆಪಿ ನಾಯಕರಿಗೆ ತುಂಬು ಹೃದಯದ ಧನ್ಯವಾದಗಳು. ಬಿಜೆಪಿ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ. ಬೆಜೆಪಿ ಬೆಂಬಲ ಸಿಗುವ ನಿರೀಕ್ಷೆ ಇತ್ತು. ಅಲ್ಲದೇ ಮಂಡ್ಯದಲ್ಲಿ ಇನ್ಮೇಲೆ ನೇರ ಯುದ್ದ ನಡೆಯಲಿದೆ ಎಂದರು.
ಅಲ್ಲದೇ ಮಹಿಳೆಯರಿಂದಲೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು ಸುಮಲತಾ ಅಂಬರೀಶ್.ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಕಲ್ಲು ತೂರಾಟದಿಂದ ದರ್ಶನ್ ಹೆದರಲ್ಲ. ನಾನು ದರ್ಶನ್ಗೆ ಫೋನ್ ಮಾಡಿದ್ದೆ. ದರ್ಶನ್ ಡೋಂಟ್ ವರಿ ಮದರ್ ಇಂಡಿಯಾ ಎಂದು ನನಗೇ ಧೈರ್ಯ ತುಂಬಿದರು ಎಂದು ತಿಳಿಸಿದ್ದಾರೆ.. ಇನ್ನೂ ಕೆಲವೇ ದಿನಗಳಲ್ಲಿ ಲೋಕ ಸಮರ ಶುರುವಾಗಲಿದ್ದು ಅಧಿಕಾರ ಯಾರ ಪಾಲಿಗೆ ಸಿಹಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments