ದಳಪತಿಗಳ ಬೆವರಿಳಿಸಿ, ಸುಮಲತಾ ಪರ ಘೋಷಣೆ ಕೂಗಿದ ಗ್ರಾಮಸ್ಥರು..!!
ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ… ಜೆಡಿಎಸ್ ನ ಭದ್ರ ಕೋಟೆಯಾಗಿರುವ ಮಂಡ್ಯದಲ್ಲಿಯೇ ದಳಕ್ಕೆ ನಡುಕ ಹುಟ್ಟಿದಂತಾಗಿದೆ.. ಸುಮಲತಾ ಪರ ಕ್ಯಾಂಪೆನ್ ಜೋರಾಗಿಯೇ ನಡೆಯುತ್ತಿದೆ.. ಬೆಂಬಲಿಗರು ಸುಮಲತಾ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ.. ಮದ್ದೂರು ತಾಲೂಕಿನ ಚಿಕ್ಕೋನಹಳ್ಳಿಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಜೆಡಿಎಸ್ ಶಾಸಕರ ಬೆವರಿಳಿಸಿದ ಗ್ರಾಮಸ್ಥರು, ಸುಮಲತಾ ಅಂಬರೀಶ್ ಪರವಾಗಿ ಘೋಷಣೆ ಕೂಗಿದ್ದಾರೆ.ನಾಗಮಂಗಲ ಶಾಸಕ ಕೆ. ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನೇತೃತ್ವದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಪರವಾಗಿ ಚಿಕ್ಕೋನಹಳ್ಳಿಯಲ್ಲಿ ಪ್ರಚಾರ ನಡೆಸಲಾಗಿದೆ.
ಈ ವೇಳೆ ಜೆಡಿಎಸ್ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಈ ಹಿಂದೆ ಶಾಸಕರಾಗಿದ್ದ ಚೆಲುವರಾಯಸ್ವಾಮಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ, ಅದನ್ನು ಲೆಕ್ಕಿಸದೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ತಮ್ಮನ್ನು ಬೆಂಬಲಿಸಲಾಗಿತ್ತು. ಚುನಾವಣೆಯಲ್ಲಿ ಮಾತ್ರ ಬಂದು ಮತ ಕೇಳುತ್ತಿರಿ.. ಇಲ್ಲ ಅಂದರೆ ನಮ್ಮನ್ನ ನೋಡುವುದೆ ಇಲ್ಲ.. ಈ ಹೊರತು ಮತ್ತೆ ಇತ್ತ ತಲೆ ಹಾಕುವುದಿಲ್ಲ ಎಂದು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕೆಲವರು ಸಮಾಧಾನಪಡಿಸಲು ಮುಂದಾದರೂ, ಕೇಳದ ಗ್ರಾಮಸ್ಥರು ಜೆಡಿಎಸ್ ಮುಖಂಡರಿಗೆ ಬೆವರಿಳಿಸಿದ್ದು, ಸುಮಲತಾ ಅಂಬರೀಶ್ ಪರವಾಗಿ ಘೋಷಣೆ ಕೂಗಿದ್ದಲ್ಲದೇ, ಅವರಿಗೇ ಮತ ಹಾಕುವುದಾಗಿ ತಿಳಿಸಿದ್ದಾರೆ. ಸುಮಲತಾ ಅವರಿಗೆ ಅಂಬಿ ಅಭಿಮಾನಿಗಳ ಬೆಂಬಲ ಇರುವುದು ಮೆಲ್ನೋಟ್ಟಕ್ಕೆ ಕಂಡುಬರುತ್ತಿದೆ..ಆದರೆ ಇತ್ತ ಮಗನನ್ನು ಗೆಲ್ಲಿಸಲು ಕುಮಾರಸ್ವಾಮಿಯವರು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.. ಇಬ್ಬರ ಮಧ್ಯೆಯು ಪ್ರಬಲ ಪೈಪೋಟಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಯಾರು ಅಧಿಕಾರದ ಗದ್ದುಗೆಯನ್ನು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments