ಸುಮಲತಾ ಸೋಲಿಗೆ ಸ್ಕೆಚ್ ಹಾಕ್ತಿದ್ದಾರೆ ಈ ಸ್ಟಾರ್ ನಟಿ..!?

ಈಗಾಗಲೇ ಲೋಕ ಸಮರ ಸಮೀಪಿಸುತ್ತಿದೆ.. ಲೋಕ ಸಮರದ ಜಿದ್ದಾಜಿದ್ದಿ ಹೆಚ್ಚಾಗಿಯೇ ನಡೆಯುತ್ತಿದೆ… ಈಗಾಗಲೇ ಹಲರು ನಾಮಪತ್ರ ಸಲ್ಲಿಸಿದ್ದಾರೆ.. ಎಲ್ಲಾ ಪಕ್ಷದವರು ಭರ್ಜರಿ ಕ್ಯಾಂಪೆನ್ ಶುರು ಮಾಡಿಕೊಂಡಿದ್ದಾರೆ. ಆದರೆ ಮಂಡ್ಯದ ಹೈವೋಲ್ಟೇಜ್ ಅಖಾಡ ಮಾತ್ರ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.. ಸುಮಲತಾ ಅವರನ್ನು ಸೋಲಿಸಲೇ ಬೇಕು ಎಂದು ಸಾಕಷ್ಟು ಕಾಣದ ಕೈಗಳು ಪಣತೊಟ್ಟಿವೆ.. ಆದರೆ ನಾನು ಗೆದ್ದೆ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸ ಸುಮಲತಾ ಅವರ ಬಳಿ ಇದೆ.. ಇದೀಗ ಮಾಜಿ ಸಂಸದೆ ನಟಿ ರಮ್ಯಾ ಕೂಡ ಸುಮಲತ ಅವರನ್ನು ಸೋಲಿಸಲು ಹೊಂಚು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಈಗ ಮಂಡ್ಯ ಅಖಾಡದಲ್ಲಿ ಸುಮಲತಾ ವಿರುದ್ಧ ರಮ್ಯಾ ಆಪ್ತ ವಲಯ ಮಸಲತ್ತು ನಡೆಯುತ್ತಿದೆ.ದೆಹಲಿಯಲ್ಲೇ ಕುಳಿತು ರಮ್ಯಾ ಮುಯ್ಯಿಗೆ ಮುಯ್ಯಿ ರಾಜಕಾರಣ ಪ್ರಾರಂಭ ಮಾಡಿದ್ದಾರಾ ಎಂಬ ಪ್ರಶ್ನೆ ಈಗ ಶುರುವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕಣದಿಂದ ಸೋತಿದ್ದರು. ಆಗ ಅಂಬರೀಶ್ ಬೆಂಬಲಿಗರು ಕಾಟ ಕೊಟ್ಟಿದ್ರು ಎಂದು ಆರೋಪ ಮಾಡಲಾಗಿತ್ತು. ಇಂದು ಅಂಬರೀಶ್ ಪತ್ನಿ ಸುಮಲತಾ ಮಂಡ್ಯ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ.
ಇದನ್ನೇ ರಾಜಕೀಯ ಟಾಂಗ್‍ಗೆ ರಮ್ಯಾ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಯಾಕಂದ್ರೆ ಮಂಡ್ಯದಲ್ಲಿರುವ ರಮ್ಯಾ ಆಪ್ತರಿಂದಲೇ ಅಖಾಡದಲ್ಲಿ ಜಿದ್ದಾಜಿದ್ದಿ ಪ್ರಾರಂಭವಾಗಿದೆ ಎನ್ನಲಾಗುತ್ತಿದೆ.. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಂಬರೀಶ್ ಅಭಿಮಾನಿಗಳು ಮಾಜಿ ಸಂಸದೆ ವಿರುದ್ಧ ಗರಂ ಆಗಿದ್ದಾರೆ…ರಾತ್ರೋ ರಾತ್ರಿ ಮಂಡ್ಯ ಬಿಟ್ಟ ರಮ್ಯಾ ವಿರುದ್ದ ಮಂಡ್ಯ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು.. ಇದೀಗ ಮತ್ತೆ ಮಂಡ್ಯ ಜನತೆಯ ಕೋಪಕ್ಕೆ ತುತ್ತಾಗಿದ್ದಾರೆ.
Comments