ದೇವೆಗೌಡರ ಮೊಮ್ಮಗನ ಆಸ್ತಿ ಎಷ್ಟು ಗೊತ್ತಾ..?
ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಮೊಮ್ಮಗ, ಸಚಿವ ಹೆಚ್.ಡಿ. ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.. ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಪ್ರಜ್ವಲ್ ರೇವಣ್ಣ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಾವು ಹೊಂದಿರುವ ಆಸ್ತಿ ವಿವರದ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ..
ದೇವೆಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ 10.11 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಅಷ್ಟೆ ಅಲ್ಲದೆ, ಚರಾಸ್ತಿಗಳಲ್ಲಿ 18 ಹಸು ಹಾಗೂ 2 ಎತ್ತುಗಳು ಸೇರಿಕೊಂಡಿವೆ. ಪ್ರಜ್ವಲ್ ರೇವಣ್ಣನವರ ಬಳಿ ಸ್ವಂತಕ್ಕೆ ಕಾರ್ ಇಲ್ಲ… ಕೃಷಿ ಉದ್ದೇಶಕ್ಕೆ 5 ಲಕ್ಷ ರೂ ಮೌಲ್ಯದ ಟ್ರಾಕ್ಟರ್ ಹೊಂದಿದ್ದಾರೆ. ಪ್ರಜ್ವಲ್ ರೇವಣ್ಣ, ತಮ್ಮ ಅಜ್ಜಿ ಚನ್ನಮ್ಮಗೆ 23 ಲಕ್ಷ ರೂ., ಸಹೋದರ ಸೂರಜ್ ಗೆ 37.20 ಲಕ್ಷ ರೂ. ಹಾಗೂ ಸನ್ ಡ್ರೈ ಲೋನ್ಸ್ ಅಂಡ್ ಅಡ್ವಾನ್ಸ್ ಸಂಸ್ಥೆಗೆ 25 ಲಕ್ಷ ರೂ. ಸಾಲವನ್ನು ಕೊಟ್ಟಿದ್ದಾರೆ. ಜೊತೆಗೆ ವಿವಿಧೆಡೆ ಕೃಷಿ ಹಾಗೂ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಗೌಡರ ಮೊಮ್ಮಗ ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಹಾಸನ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ.. ಜೆಡಿಎಸ್ ನ ಭದ್ರ ಕೋಟೆಯಾಗಿರುವ ಹಾಸನದಲ್ಲಿ ಪ್ರಜ್ವಲ್ ಗೆದ್ದು ಗೆಲುವಿನ ನಗೆ ಬೀರುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments