ಸುಮಲತಾ ಪರ ನಿಂತಿದ್ದೆ ತಪ್ಪಾಯ್ತಾ…!! ಪಕ್ಷದಿಂದ ಉಚ್ಛಾಟನೆಗೊಂಡ ಕೈ ಶಾಸಕ..?
ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಘೋಷಣೆಗಳು ಜೋರಾಗಿಯೇ ಕೇಳಿ ಬರುತ್ತಿವೆ.. ಅಂಬಿ ಮೇಲಿನ ಅಭಿಮಾನ ಎಷ್ಟಿತ್ತು ಅನ್ನೋದಕ್ಕೆ ಇಂದು ಸುಮಲತಾ ಅವರನ್ನು ಬೆಂಬಲಿಸುತ್ತಿರುವುದೆ ಸಾಕ್ಷಿ.. ಮಂಡ್ಯ ಜನತೆಯ ಪ್ರೀತಿ ಇನ್ನು ಅಂಬರೀಶ್ ಕುಟುಂಬದ ಮೇಲಿದೆ ಅನ್ನೊದಕ್ಕೆ ಸುಮಲತಾ ಅವರನ್ನು ಬೆಂಬಲಿಸುತ್ತಿರುವುದರಲ್ಲೆ ಗೊತ್ತಾಗುತ್ತದೆ. ದೋಸ್ತಿ ಸರ್ಕಾರಗಳು ಸುಮಲತಾ ಅಖಾಡಕ್ಕೆ ಇಳಿದಿರುವುದರ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿವೆ.. ಮೊದಲ ಬಾರಿಗೆ ಜೆಡಿಎಸ್ ಭದ್ರ ಕೋಟೆಯಲ್ಲಿ ಭಯ ಕಾಣಿಸುತ್ತಿದೆ.. ಆದರೆ ಇದನ್ನೆಲ್ಲಾ ನಾರ್ಮಲ್ ಆಗಿಯೇ ತೆಗೆದುಕೊಂಡಿರುವ ಕುಮಾರಣ್ಣ ನಿಖಿಲ್ ಗೆಲುವಿಗೆ ರಣ ತಂತ್ರವನ್ನು ರೂಪಿಸುತ್ತಿದ್ದಾರೆ.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೊಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸಚಿವ ಎಂ.ಬಿ.ಪಾಟೀಲ್ ಆಪ್ತ ಎಂದೇ ಗುರುತಿಸಿಕೊಂಡಿದ್ದ ಕೈ ಮುಖಂಡ ಸಚ್ಚಿದಾನಂದರನ್ನು ಕೆಪಿಸಿಸಿ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ.ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಖಿಲ್ ಕುಮಾರ್ ಸ್ವಾಮಿಗೆ ಬೆಂಬಲಿಸುವಂತೆ ಹೇಳಿತ್ತು. ಆದರೆ ಕಾಂಗ್ರೆಸ್ ಕೆಲವು ಶಾಸಕರು ಬಹಿರಂಗವಾಗಿಯೇ ಸುಮಲತಾ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದರು.. ಸುಮಲತಾ ಅವರಿಗೆ ಬೆಂಬಲ ಸೂಚಿಸುತ್ತಿರುವುದು ದೋಸ್ತಿ ಸರ್ಕಾರದಲ್ಲಿ ಭಯ ಹುಟ್ಟಿಸುತ್ತಿದೆ.. ಕೇವಲ ಕಾಂಗ್ರೆಸ್ ಅಷ್ಟೆ ಅಲ್ಲ ಬಿಜೆಪಿಯು ಕೂಡ ಸುಮಲತಾ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
Comments