'ಕೈ' ಗೆ ಕೈ ಕೊಟ್ಟು 'ಕಮಲ' ಅರಳಿಸಲು ಮುಂದಾದ ಪ್ರಭಾವಿ ಶಾಸಕ..!!
ಲೋಕ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದಾರೆ… ಸ್ವಲ್ಪ ದಿನಗಳ ಹಿಂದೆ ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು…ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ಕಾಂಗ್ರೆಸ್ ನಲ್ಲಿ ಟೆನ್ಶನ್ ಹೆಚ್ಚಾಗ್ತಿದೆ. ಕಾರಣ, ಹೈದ್ರಾಬಾದ್ ಕರ್ನಾಟಕದ ಪ್ರಭಾವಿ ಮುಖಂಡ, ಮಾಜಿ ಸಚಿವ ಎ.ಬಿ. ಮಾಲಕರೆಡ್ಡಿ ಪಕ್ಷಕ್ಕೆ ವಿದಾಯ ಹೇಳಲು ಇದೀಗ ಮುಂದಾಗಿದ್ದಾರೆ.
ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗುವ ಯಾವುದೇ ಅಭ್ಯರ್ಥಿಯಾಗುವ ಅರ್ಹತೆ ಇಲ್ಲ. ಹಾಗೂ ಅವರ ನಾಯಕತ್ವವೂ ಸಮರ್ಥವಾಗಿಲ್ಲ ಅಂತಾ ಹೇಳಿದ್ದ ಮಾಲಕರಡ್ಡಿ ಕಾಂಗ್ರೆಸ್ ನಿಂದ ಹೊರಬರಲು ಇದೀಗ ಮುಂದಾಗಿದ್ದಾರೆ. ಕಳೆದ ತಿಂಗಳಷ್ಟೇ ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ರು. ಇದೀಗ ಮಾಲಕರಡ್ಡಿ ಕೂಡಾ ಕೈ ಬಿಟ್ಟು ಕಮಲ ಹಿಡಿಯಲು ಮುಂದಾಗಿದ್ದು, ಇಂದು ಬಿಎಸ್ವೈ ಅವರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಪ್ರಭಾವಿ ಮುಖಂಡರಾಗಿರುವ ಮಾಲಕರಡ್ಡಿ ಪಕ್ಷ ತೊರೆಯುತ್ತಿರುವುದು ಕೈ ಪಾಳೆಯಕ್ಕೆ ಭಾರಿ ಹೊಡೆತ ಬಿದ್ದಿದೆ. ಅಲ್ಲದೆ ಆ ಭಾಗದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೂ ಹಿನ್ನಡೆಯಾಗಿದೆ. ಒಟ್ಟಾರೆಯಾಗಿ ಒಬ್ಬೊಬ್ಬರೆ ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದರೆ ಇತ್ತ ದೋಸ್ತಿ ಸರ್ಕಾರಕ್ಕೆ ನಡುಕ ಹುಟ್ಟಿದಂತಾಗುತ್ತಿದೆ.
Comments