ಡಿ.ಕೆ ಸುರೇಶ್ ವಿರುದ್ದ ಯೋಗೇಶ್ವರ್ ಪುತ್ರಿ ಕಣಕ್ಕೆ…!! ಯಾವ ಕ್ಷೇತ್ರ ಗೊತ್ತಾ..?

ಲೋಕ ಸಮರ ಸಮೀಪಿಸುತ್ತಿದ್ದಂತೆ ಈಗಾಗಲೇ ಎಲ್ಲ ಕಡೆ ಭರ್ಜರಿ ಪ್ರಚಾರ ಕೈಗೊಳ್ಳುತ್ತಿದ್ದಾರೆ.. ಆದರೆ ಕೆಲವೊಂದು ಕಡೆ ಇನ್ನೂ ಅಭ್ಯರ್ಥಿಗಳೇ ಫೈನಲ್ ಆಗಿಲ್ಲ… ರಾಜ್ಯ ರಾಜಕಾರಣಕ್ಕೆಈಗಾಗಲೇ ಸಾಕಷ್ಟು ನಟ ನಟಿಯರು ಅವರ ಪುತ್ರ ಪುತ್ರಿಯರು ಎಂಟ್ರಿ ಕೊಟ್ಟಿದ್ದಾರೆ.. ಬೆಂಗಳೂರು ಗ್ರಾಮಾಂತರ ಇದೀಗ ಅಚ್ಚರಿಯ ಹೆಸರೊಂದು ಕೇಳಿ ಬರುತ್ತಿದೆ.
ಈಗಾಗಲೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಹೆಸರು ಕೇಳಿಬರುತ್ತಿದೆ.ಇವೆಲ್ಲದರ ನಡುವೆ ಹಾಲಿ ಸಂಸದರ ಪೈಕಿ ಪಿ.ಸಿ ಗದ್ದಿಗೌಡರ್, ನಳಿನ್ ಕುಮಾರ್ ಕಟೀಲ್, ಹಾಗೂ ಅನಂತ ಕುಮಾರ್ ಹೆಗಡೆ ಟಿಕೇಟ್ ನೀಡಬಾರದು ಅಂತ ಬುಧವಾರ ನಡೆದಂತಹ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಅಮಿತ್ ಶಾ ಮುಂದೆ ಮನವಿ ಸಲ್ಲಿಸಿದ್ದರು, ಆದರೆ ಇದೇ ವೇಳೆ ಬಿಎಸ್ ಯಡಿಯೂರಪ್ಪ ಅವರ ಪರವಾಗಿ ನಿಂತು ಟಿಕೇಟ್‌ಗೆ ಲಾಭಿ ನಡೆಸಿದ್ದು, ಅದು ಯಶಸ್ವಿಯಾಗಿದೆ ಎನ್ನಲಾಗಿದೆ.ಕೋಲಾರಕ್ಕೆ ಡಿ.ಎಸ್. ವೀರಯ್ಯ ಬದಲಿಗೆ ಛಲವಾದಿ ನಾರಾಯಣಸ್ವಾಮಿ ಚಿತ್ರದುರ್ಗಕ್ಕೆ ಎ. ನಾರಾಯಣಸ್ವಾಮಿ, ಚಿಕ್ಕೋಡಿಗೆ ರಮೇಶ್ ಕತ್ತಿ ಬದಲು ಅಣ್ಣಾ ಸಾಹೇಬ್ ಜೊಲ್ಲೆ ಹೆಸರು ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಯಾರು ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೋ ಅಥವಾ ರಾಜಕೀಯದಿಮದ ದೂರ ಉಳಿಯುತ್ತಾರೋ ಗೊತ್ತಿಲ್ಲ…ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಯಾರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾರೋ ಕಾದು ನೋಡಬೇಕಾಗಿದೆ.
Comments