‘ಕಮಲ’ವನ್ನು ಕಮರಿಸಿ ‘ದೋಸ್ತಿ’ ಸರ್ಕಾರಕ್ಕೆ ಸೇರ್ತಾರಾ ಈ ಬಿಜೆಪಿ ಶಾಸಕ..!!

ಲೋಕ ಸಮರ ಶುರುವಾಗುತ್ತಿರುವ ಹಿನ್ನಲೆಯಲ್ಲಿಯೇ ಅಭ್ಯರ್ಥಿಗಳು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವಲ್ಲಿ ದೋಸ್ತಿ ಸರ್ಕಾರವು ವಿಫಲವಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಆಪರೇಷನ್ ಕಮಲದ ಮೂಲಕ ದೋಸ್ತಿ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿಯು ಗೆಲುವನ್ನು ಸಾಧಿಸುತ್ತಿದೆ. ಒಂದು ಕಡೆ ಉಮೇಶ್ ಜಾಧವ್ ಮತ್ತೊಂದು ಕಡೆ ಎ ಮಂಜು ಇಬ್ಬರು ಕೂಡ ಈಗಾಗಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಇದೀಗ ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಬೆನ್ನಲ್ಲೇ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಯೋಗಾ ರಮೇಶ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಫೋಟೋ ವೈರಲ್ ಆಗಿದೆ. ಎರಡು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎ.ಮಂಜು ಬಿಜೆಪಿ ಸೇರ್ಪಡೆ ಬಗ್ಗೆ ಯೋಗಾ ರಮೇಶ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ನಿನ್ನೆ ನಗರದ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಆಗಮಿಸಿದ ಯೋಗ ರಮೇಶ್ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆನಡೆಸಿದ್ದಾರೆ. ಈ ವೇಳೆ ಸಚಿವ ಜಮೀರ್ ಅಹ್ಮದ್ ಕೂಡ ಉಪಸ್ಥಿತರಿದ್ದರು. ಯೋಗ ರಮೇಶ್ ಬಿಜೆಪಿ ತೊರೆದು ದೋಸ್ತಿ ಜೊತೆ ಕೈ ಜೋಡಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments