ಗೌಡರ ಕುಟುಂಬಕ್ಕೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಸ್ಯಾಂಡಲ್ವುಡ್ ದೋಸ್ತಿಗಳು..!! ಇದಕ್ಕೆ ಕುಮಾರಣ್ಣನ ಉತ್ತರ ಏನ್ ಗೊತ್ತಾ…?
ಮಂಡ್ಯ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸುಮಲತಾ ಪರ ಸ್ಟಾರ್ ನಾಯಕರು ಪ್ರಚಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಆದರೆ ಮಂಡ್ಯದಲ್ಲಿ ದರ್ಶನ್ ಮತ್ತು ಸುಮಲತ ಪರ ಗೋಬ್ಯಾಕ್ ದರ್ಶನ್ ಅಂಡ್ ಯಶ್ ಎಂದು ಜೆಡಿಎಸ್ ಅಭಿಮಾನಿಗು ಹೇಳುತ್ತಿದ್ದರು.. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಯಶ್ ಮತ್ತು ದರ್ಶನ್ ರೆಬಲ್ ಪತ್ನಿಯ ಪರ ನಿಂತಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.ಇದೀಗ ಸುಮಲತಾ ಪರ ಪ್ರಚಾರಕ್ಕೆ ನಿಂತ ದರ್ಶನ್ ಮತ್ತು ಯಶ್ ಸಿಎಂ ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ.. ಪತ್ರಿಕಾ ಗೋಷ್ಟಿಯಲ್ಲಿ ಗೌಡರ ಕುಟುಂಬದ ಪ್ರಶ್ನೆ ಮಾಡಿದ ಯಶ್ ಮತ್ತು ದರ್ಶನ್ ಚುನಾವಣೆಯಲ್ಲಿ ನಿಂತು ಕೊಳ್ಳಲು ಎಲ್ಲಾ ಅರ್ಹತೆ ಇದೆ ಎಂದಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿಖಿಲ್ ಗೆದ್ದೆ ಗೆಲ್ಲುತ್ತಾರೆ.. ಮಂಡ್ಯದ ಜನತೆಗೆ ನಮ್ಮ ಬಗ್ಗೆ ಒಲವಿದೆ ಎಂದಿದ್ದಾರೆ. ಮಂಡ್ಯ ಜೆಡಿಎಸ್ ನ ಭದ್ರ ಕೋಟೆಯಾಗಿದೆ..ಹಾಗಾಗಿ ಅಲ್ಲಿ ನಿಖಿಲ್ ಗೆಲ್ಲುತ್ತಾರೆ ಎಂಬ ಭರವಸೆ ಎಂದಿದ್ದಾರೆ.
Comments