ಅಬ್ಬಾ..!! ಕೊನೆಗೂ ಸಿಕ್ತು ಮಂಡ್ಯ ಅಭ್ಯರ್ಥಿಗೆ ಸ್ಟಾರ್ ನಾಯಕರ ಬೆಂಬಲ..!! ನಿಖಿಲ್ ಪರವೋ, ಸುಮಲತಾ ಪರವೋ..!!!

ಮಂಡ್ಯ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸುಮಲತಾ ಪರ ಸ್ಟಾರ್ ನಾಯಕರು ಪ್ರಚಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಆದರೆ ಮಂಡ್ಯದಲ್ಲಿ ದರ್ಶನ್ ಮತ್ತು ಸುಮಲತ ಪರ ಗೋಬ್ಯಾಕ್ ದರ್ಸನ್ ಅಂಡ್ ಯಶ್ ಎಂದು ಜೆಡಿಎಸ್ ಅಭಿಮಾನಿಗು ಹೇಳುತ್ತಿದ್ದರು.. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಯಶ್ ಮತ್ತು ದರ್ಶನ್ ರೆಬಲ್ ಪತ್ನಿಯ ಪರ ನಿಂತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ರಾಜ್ಯ ರಾಜಕೀಯದಲ್ಲಿ ಬಾರೀ ಕುತೂಹಲ ಮೂಡಿಸಿದ್ದ ವಿಷಯಕ್ಕೆ ಇದೀಗ ತೆರೆ ಬಿದ್ದಿದೆ. ತಾವು ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್ ತಿಳಿಸಿದ್ದಾರೆ. ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಕೂಡ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಇವರ ಜೊತೆಗೆ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಮೊದಲಾದವರು ಪಾಲ್ಗೊಂಡಿದ್ದು ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಚಿತ್ರರಂಗದ ಬಹುತೇಕರ ಬೆಂಬಲ ಸುಮಲತಾ ಅವರಿಗಿರುವುದು ಖಚಿತವಾಗಿದೆ.
ಸುಮಲತಾ ಅಂಬರೀಷ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದು ಚುನಾವಣೆಯ ಹಾದಿಯಲ್ಲಿ ಸ್ಪರ್ಧಿಸುವ ಕುರಿತ ಅವರ ನಿರ್ಧಾರ ಪ್ರಕಟಿಸಲಿದ್ದಾರೆ. ಒಟ್ಟಾರೆ ನಿಖಿಲ್ ಮತ್ತು ಸುಮಲತಾ ನಡುವೆ ಪ್ರಬಲ ಪೈಪೋಟಿ ಏರ್ಪಡುವುದಂತೂ ಸುಳ್ಳಲ್ಲ.. ಮಂಡ್ಯ ಜನತೆಯ ಒಲವು ಯಾರ ಕಡೆ ಇದೆ ಎಂಬುದನ್ನು ಇನ್ನು ಸ್ವಲ್ಪ ತಿಂಗಳು ಕಾದು ನೋಡಬೇಕಿದೆ.
Comments