ಹನಿಮೂನ್’ಗೆ ಹೋಗಿರುವ ಸಿದ್ದಾರ್ಥ್ ಬರುವವರೆಗೆ ಚಂದ್ರಿಕಾ ಸಿಗಲ್ವಂತೆ..! ಟ್ರೋಲಿಗರ ಬಾಯಿಗೆ ಆಹಾರವಾದ ‘ಅಗ್ನಿಸಾಕ್ಷಿ’..!!!

ಕನ್ನಡ ಕಿರುತೆರೆಯಲ್ಲಿ ಕೆಲವೊಂದು ಧಾರವಾಹಿಗಳು ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.. ಅದರಲ್ಲಿ ಅಗ್ನಿಸಾಕ್ಷಿ ಧಾರವಾಹಿ ಕೂಡ ಒಂದು… ಸುಮಾರು 6 ವರ್ಷಗಳಿಂದ ಪ್ರಸಾರ ವಾಗುತ್ತಿರುವ ಧಾರವಾಹಿ ಗೆ ಅಭಿಮಾನಿಗಳ ಬಳಗ ಸಾಕಷ್ಟಿದೆ.. ಸಿದ್ದಾರ್ಥ್ ಸನ್ನಿಧಿಯ ಜೋಡಿಗೆ ಮರುಳಾದ ಅಭಿಮಾನಿಗಳು ಅದೆಷ್ಟೊ ಗೊತ್ತಿಲಲ್ಲ..ಅಂದಿನಿಂದ ಇಂದಿನವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಗ್ನಿಸಾಕ್ಷಿ ಯಶಸ್ವಿಯಾಗಿದೆ ಎನ್ನಬಹುದು.. ರಾತ್ರಿ 8 ಗಂಟೆ ಆಯಿತು ಅಂದರೆ ಸಾಕು ಮಾಡೋ ಕೆಲಸವನ್ನುಬಿಟ್ಟು ಟಿವಿ ಮುಂದೆ ಹಾಜರಾಗುತ್ತಾರೆ..
ಇತ್ತಿಚಿಗಷ್ಟೆ ಚಂದ್ರಿಕಾ ಬಣ್ಣ ಬಯಲಾಗಿದೆ.. ಇದರಿಂದ ಅಭಿಮಾನಿಗಳು ಸದ್ಯ ಈಗಾದರೂ ಸತ್ಯ ತಿಳಿಯಿತ್ತಲ್ಲ ಎಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.. ಇದೀಗ ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರವಾಹಿ ಮತ್ತೆ ಟ್ರೋಲಿಗರ ಬಾಯಿಗೆ ತುತ್ತಾಗಿದೆ. ವಿಲನ್ ಚಂದ್ರಿಕಾರನ್ನು ಸೆರೆಹಿಡಿಯಲು ಪೊಲೀಸರು ಹುಡುಕಾಡುತ್ತಿರುವುದನ್ನು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಚಂದ್ರಿಕಾ ಸಿಗದೇ ಇರುವುದಕ್ಕೆ ಸಿದ್ಧಾರ್ಥ್ ಹನಿಮೂನ್ ಗೆ ಹೋಗಿರುವುದೇ ಕಾರಣ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಿಯಲ್ ಲೈಫ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಾಯಕ ಸಿದ್ಧಾರ್ಥ್ ಈಗ ಒಂದು ವಾರದಿಂದ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ಈ ರೀತಿ ಟ್ರೋಲ್ ಮಾಡಿದ್ದಾರೆ. ಅತ್ತ ತಲೆಮರೆಸಿಕೊಂಡಿರುವ ಚಂದ್ರಿಕಾಳನ್ನು ಸೆರೆಹಿಡಿಯಲು ಪೊಲೀಸರು ಪ್ರಯತ್ನ ಮಾಡುತ್ತಿದ್ದರೆ, ಇತ್ತ ಸಿದ್ಧಾರ್ಥ್ ನಾಪತ್ತೆಯಾಗಿದ್ದಾನೆ. ಅಸಲಿಗೆ, ಮದುವೆ, ಹನಿಮೂನ್ ಎಂದು ಬ್ಯುಸಿಯಾಗಿರುವ ಕಾರಣ ನಾಯಕ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಶೂಟಿಂಗ್ ಗೆ ಬರಲಾಗುತ್ತಿಲ್ಲ. ಇದಕ್ಕೇ ಕತೆ ಹೀಗೆ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಧಾರವಾಹಿಯ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.
Comments