ಟ್ವೀಟ್’ನಲ್ಲೆ ಸುಮಲತಾಗೆ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ..!!

16 Mar 2019 10:13 AM | Politics
2425 Report

ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗಧಿಯಾಗಿದೆ.. ಇದರ ಬೆನ್ನಲೆ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿವೆ…  ಇರುವ ಎಲ್ಲಾ ಜಿಲ್ಲೆಗಳಿಗಿಂತಲೂ ಮಂಡ್ಯ ಜಿಲ್ಲೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಜೆಡಿಎಸ್ ಗೆ ಪ್ರತಿಷ್ಟೆಯ ಕಣವಾಗಿರುವ ಮಂಡ್ಯದಿಂದ ದೋಸ್ತಿ ಒಪ್ಪಂದದ ಮೇರೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಆಸೆಗೆ ತಣ್ಣೀರು ಎರಚಿದಂತೆ ಆಯಿತು. ಇದೇ ಹಿನ್ನಲೆಯಲ್ಲಿ ಸುಮಲತಾ ಅಂಬರೀಶ್ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಒಂದು ರೀತಿಯ ಸಂಚಲನವನ್ನೆ ಉಂಟು ಮಾಡಿತ್ತು..

ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಮತ್ತು ಸುಮಲತಾ ಅವರು ಹೇಳಿದ ಹೇಳಿಕೆಗೆ ಇದೀಗ ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ತಿರುಗೇಟು ಕೊಟ್ಟಿದ್ದಾರೆ. ಸರಣಿ ಟ್ವೀಟ್ ಮಾಡಿದ ಕುಮಾರಸ್ವಾಮಿ ಸಿಎಂ ಆದಮೇಲೆ ನೀವು ಬಿಜೆಪಿಗೆ ಹೋದಾಗಲೆ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ ಎಂದು ಎಸ್‍ಎಂ ಕೃಷ್ಣ ಅವರಿಗೆ ಹಾಗೂ ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ನಾವು ಕೇಳಲು ಕಾತರರಾಗಿದ್ದೇವೆ ಎಂದು ಸುಮಲತಾ ಅವರಿಗೆ ಕುಮಾರಸ್ವಾಮಿಯವರು ಟಾಂಗ್ ಕೊಟ್ಟಿದ್ದಾರೆ.

ಗೌರವಾನ್ವಿತ ಸುಮಲತಾ ಅವರೇ, ನಿಮ್ಮ ರೈತಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ.... ಈಗ ದಿಢೀರನೆ ಪ್ರತ್ಯಕ್ಷರಾಗಿ ಪ್ರತೀ ದಿನ ಹೊಲ ಗದ್ದೆಗಳಲ್ಲಿ ದುಡಿದು, ಉತ್ತು ಬಿತ್ತಿದ ಅನುಭವ ಹಂಚಿಕೊಳ್ಳುತ್ತಿದ್ದೀರಿ. ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ಕೇಳಲು ನಾವು ಕಾತರರಾಗಿದ್ದೇವೆ.  ಎಂದು ಟ್ವೀಟ್ ಮಾಡಿ ಸುಮಲತಾ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಇನ್ನೂ ಎಸ್ ಎಂ ಕೃಷ್ಣ ಅವರಿಗೆ: ಮಾನ್ಯ ಕೃಷ್ಣ ಸಾಹೇಬರಿಗೆ ಗೌರವಯುತ ನಮಸ್ಕಾರಗಳು. ನೀವು ತುಂಬಾ ಮುಂದೆ ಹೆಜ್ಜೆ ಹಾಕಿಬಿಟ್ಟಿರುವುದರಿಂದ ನೀವು ನಡೆದು ಬಂದ ಹಾದಿ ಮರೆತುಹೋಗಿದೆ ಎಂದು ಭಾವಿಸುತ್ತೇನೆ. 50 ವರ್ಷ ಕಾಲ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ... ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ. ಇಟ್ಟೆಲ್ಲ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ. ಬಹಳ ಸಂತೋಷ.... ಎಂದು ಟ್ವೀಟ್ ನಲ್ಲಿಯೇ ಇಬ್ಬರಿಗೂ ಕೂಡ ತಿರುಗೇಟು ನೀಡಿದ್ದಾರೆ..

ಒಟ್ಟಿನಲ್ಲಿ ಈ ಟ್ವೀಟ್ ವಾರ್ ಸದ್ಯಕ್ಕೆ ಮುಗಿಯುವ ಆಗೆ ಕಾಣುವುದಿಲ್ಲ.ಒಂದಲ್ಲ ಒಂದು ವಿಷಯಕ್ಕಾಗಿ ಟ್ವೀಟ್ ಗಳ ಹಾಗೂ ರೀಟ್ವೀಟ್ ಗಳ ಸುರಿ ಮಳೆ ಆಗುತ್ತಲೆ ಇರುತ್ತವೆ.

Edited By

Manjula M

Reported By

Manjula M

Comments