ಮಂಡ್ಯದಲ್ಲಿ ನಿಖಿಲ್ ಹೆಸರು ಘೋಷಣೆಯಾಗುತ್ತಿದ್ದಂತೆ ಬೆಂಗಳೂರಿಗೆ ಸುಮಲತಾ ಅಂಬರೀಶ್..!!
ಲೋಕಸಭಾ ಚುನಾವಣೆಯ ದಿನಾಂಕ ನಿಗಧಿಯಾದ ಮೇಲೆ ಚುನಾವಣೆಯ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ…ಈಗಾಗಲೇ ಎಲ್ಲ ಪಕ್ಷದವರು ಕೂಡ ಅಭ್ಯರ್ಥಿಯನ್ನುಆಯ್ಕೆ ಮಾಡುವ ಗೊಂದಲದಲ್ಲಿ ಇದ್ದಾರೆ.. ರಣರಂಗವಾಗಿದ್ದ ಮಂಡ್ಯ ಅಖಾಡಕ್ಕೆ ನೆನ್ನೆಯಷ್ಟೆ ಅಭ್ಯರ್ಥಿಯ ಘೋಷಣೆಯಾಗಿದೆ.. ಅಷ್ಟೆ ಅಲ್ಲದೆ ಮೈತ್ರಿ ಸರ್ಕಾರವಿರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು… ಹಾಗಾಗಿ ನಿಖಿಲ್ ಕುಮಾರಸ್ವಾಮಿಯನ್ನು ಜೆಡಿಎಸ್ ಅಭ್ಯರ್ಥಿಯಾಗಿ ಷೋಷಣೆ ಮಾಡಿದ್ದಾರೆ.. ಇತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಸುಮಲತಾಗೆ ಟಿಕೆಟ್ ಸಿಗಲ್ಲ ಎಂಬುದು ಸ್ಪಷ್ಟವಾಗಿದೆ.. ಹಾಗಾಗಿ ಸುಮಲತಾ ಪಕ್ಷೇತರವಾಗಿ ನಿಲ್ಲಲ್ಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಲೋಕಸಭೆ ಚುನಾವಣೆ ಕಾವು ರಂಗೇರತೊಡಗಿದೆ. ಅದರಲ್ಲಿಯೂ ಮಂಡ್ಯ ಲೋಕಸಭಾ ಕ್ಷೇತ್ರವಂತೂ ರಾಜ್ಯ ರಾಜಕೀಯದ ಗಮನ ಸೆಳೆದಿದೆ.ಮಂಡ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಸಿಎಂ ಪುತ್ರ ನಿಖಿಲ್ ಕುಮಾರ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆಯಷ್ಟೇ ನಿಖಿಲ್ ಕುಮಾರ್ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು ಈಗಾಗಲೇ ಅವರು ಪಕ್ಷದ ನಾಯಕರೊಂದಿಗೆ ಪ್ರಚಾರ ಕೈಗೊಂಡಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಇಂದು ಮಂಡ್ಯ ಪ್ರವಾಸಕ್ಕೆ ಬಿಡುವು ನೀಡಿರುವ ಸುಮಲತಾ ಅಂಬರೀಶ್, ಬೆಂಗಳೂರಿನಲ್ಲಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಲಿದ್ದಾರೆ. ಬಿಜೆಪಿ ಬೆಂಬಲ ಪಡೆಯುವ ಇಲ್ಲವೇ ಪಕ್ಷವನ್ನು ಸೇರುವ ಕುರಿತಾಗಿ ಅವರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸುಮಲತಾ ಅಂಬರೀಶ್ ಇಂದು ಎಸ್ ಎಂ ಕೃಷ್ಣರನ್ನು ಭೇಟಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
Comments