ಸುಮಲತಾ-ತಮ್ಮಣ್ಣ ನಡುವೆ ಮತ್ತೆ ಶುರುವಾಯ್ತು ವಾರ್..!!
ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಗೆ ಮಂಡ್ಯ ಅಖಾಡದಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಮಾತು ಕೇಳುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.. ಸ್ವಲ್ಪ ದಿನಗಳ ಹಿಂದೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಸುಮಲತಾ ವಿರುದ್ದ ಮಾತನಾಡಿದ್ದರು.. ಆದರೆ ಇದೀಗ ಮತ್ತೊಮ್ಮೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಸುಮಲತಾ ಅಂಬರೀಶ್ ನಡುವೆಮಾತಿನ ಚಕಮಕಿ ನಡೆದಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿಸಲು ನಾನು ನಡೆಸಿದ ಸಂಧಾನ ವಿಫಲವಾಗಿದೆ ಎಂದು ಡಿ.ಸಿ.ತಮ್ಮಣ್ಣ ನೀಡಿರುವ ಹೇಳಿಕೆಗೆ ಸುಮಲತಾ ಅಂಬರೀಶ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಏನೇ ಆದರೂ ಪರವಾಗಿಲ್ಲ ಸುಮಲತಾ ಅವರು ಚುನಾವಣೆಗೆ ನಿಲ್ಲುವುದು ಖಚಿತ ಎಂದು ತೀರ್ಮಾನಿಸಿದ ಹಿನ್ನಲೆಯಲ್ಲಿಯೇ ನಾನು ಮಧು ಎಂಬುವರ ಮೂಲಕ ಸಂಧಾನ ನಡೆಸಲು ತೀರ್ಮಾನವನ್ನು ಮಾಡಿದ್ದೆನು.. ಒಂದು ವೇಳೆ ನಮ್ಮ ಸಂಧಾನಕ್ಕೆ ಸುಮಲತಾ ಒಪ್ಪಿಗೆ ಸೂಚಿಸಿದ್ದರೆ ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಿದ್ದೆವು. ಆದರೆ ಸುಮಲತಾ ಅವರು ಸಂಧಾನಕ್ಕೆ ಬಾರದೆ ತಮ್ಮ ಮೊಂಡು ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ತಮ್ಮಣ್ಣ ಹೇಳಿಕೆಯನ್ನು ನೀಡಿದ್ದರು.
ಸುಮಲತಾ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನನ್ನನ್ನೇ ಅಭ್ಯರ್ಥಿ ಮಾಡಿ ಎಂದು ಕೇಳಿದ್ದರೆ ಕುಮಾರಸ್ವಾಮಿ ಖಂಡಿತ ಒಪ್ಪಿಕೊಳ್ಳುತ್ತಿದ್ದರು. ಆದರೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಸುಮಲತಾ ಒಪ್ಪಲಿಲ್ಲ. ಅವರಿಬ್ಬರ ನಡುವೆ ಏನು ಕಲಹವಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ನಾನು ಎಚ್‍ಡಿಕೆ ಮೇಲೆ ಒತ್ತಡ ಹಾಕಲಿಲ್ಲ ಎಂದು ತಮ್ಮಣ್ಣ ತಿಳಿಸಿದ್ದರು.. ಸುಮಲತಾ ಅಂಬರೀಶ್ ಅವರು ತಮ್ಮಣ್ಣ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದ ತಮ್ಮಣ್ಣ ಅವರು ಇದೀಗ ಸಂಧಾನಕ್ಕೆ ಮುಂದಾಗಿದ್ದೆ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಮುಗಿಯುವುದರೊಳಗೆ ಇನ್ನೂ ಯಾವ್ಯಾವ ಕಲಹಗಳು ಯಾರ ಯಾರ ಮಧ್ಯೆ ಆಗುತ್ತವೋ ಗೊತ್ತಿಲ್ಲ…
Comments