ಚಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರಿಂದ `ಗೋ ಬ್ಯಾಕ್' ಅಭಿಯಾನ..!

ಈಗಾಗಲೇ ಲೋಕಸಭಾ ಚುನಾವಣೆಯ ವಿಚಾರವಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.. ಅದರಲ್ಲೂ ಮಂಡ್ಯ ಅಖಾಡ ಮಾತ್ರ ಯಾಕೋ ತಣ್ಣಗಾಗುವ ಮುನ್ಸೂಚನೆಯಂತೂ ಕಾಣುತ್ತಿಲ್ಲ..ದಿನದಿಂದ ದಿನಕ್ಕೆ ಅದರ ಕಾವು ಹೆಚ್ಚಾಗುತ್ತಿದೆ ಹೊರತು ತಣ್ಣಗಾಗುತ್ತಿಲ್ಲ… ಮಂಡ್ಯ ಕ್ಷೇತ್ರದಿಂದ ಒಂದು ಕಡೆ ಸುಮಲತಾ ಅಂಬರೀಶ್ ಮತ್ತೊಂದು ಕಡೆ ನಿಖಿಲ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.. ಆದರೆ ಮತದಾರರ ಒಲವು ಯಾರ ಕಡೆ ಇದೆಯೋ ಗೊತ್ತಿಲ್ಲ… ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದ ಯಶ್ ಹಾಗೂ ದರ್ಶನ್ ವಿರುದ್ಧ ಇದೀಗ ಜೆಡಿಎಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.
ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುವುದಾಗಿ ನಟ ದರ್ಶನ್ ಹಾಗೂ ಯಶ್ ಈ ಮೊದಲು ತಿಳಿಸಿದ್ದರು.. ಈ ಬೆನ್ನಲೆಯಲ್ಲಿಯೇ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಸುಮಲತಾ ಪ್ರಚಾರಕ್ಕೆ ಚಿತ್ರರಂಗಕ್ಕೆ ಗೋ ಬ್ಯಾಕ್ ಅಭಿಯಾನ ಶುರು ಮಾಡುವುದಾಗಿ ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ದರ್ಶನ್ ಗೆ ಮತ್ತೆ ಯಶ್ ಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವುದೇ ಕಾರಣಕ್ಕೂ ಕೂಡ ಸುಮಲತಾ ಪರ ಮಂಡ್ಯಗೆ ಯಶ್ ಮತ್ತು ದರ್ಶನ್ ಬರಬಾರದು ಎಂದಿದ್ದಾರೆ.. ಸಿನಿಮಾರಂಗದಿಂದ ಯಾರು ಬೇಕಾದರೂ ಅಖಾಡಕ್ಕೆ ಇಳಿಯಬಹುದು ಆದರೆ ಸುಮಲತಾ ಪರ ಯಾರು ಪ್ರಚಾರ ಮಾಡಬಾರದು ಎಂದಿದ್ದಾರೆ.. ಇಂದು ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಏರ್ಪಡಿಸಿದ್ದು ದೇವೆಗೌಡರು ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಹೆಸರನ್ನು ಘೋಷಣೆ ಮಾಡಲಿದ್ದಾರೆ..
Comments