ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ..!? ಇದಕ್ಕೆ ರೆಬಲ್ ಪತ್ನಿ ಕೊಟ್ಟ ಉತ್ತರವೇನು ಗೊತ್ತಾ ..?
ಈಗಾಗಲೇ ಲೋಕಸಭಾ ಚುನಾವಣೆಯ ದಿನಾಂಕ ನಿಗಧಿಯಾಗಿದೆ.. ಇದರ ಬೆನ್ನಲೆ ಸಾಕಷ್ಟು ಅತೃಪ್ತ ಶಾಸಕರು ಪಕ್ಷ ಬಿಡಲು ನಿರ್ಧಾರ ಮಾಡಿದ್ದಾರೆ..ಮಂಡ್ಯ ಲೋಕಸಭಾ ಅಖಾಡ ರಣರಂಗವಾಗುತ್ತಿದೆ… ಈವರೆಗೂ ಕೂಡ ಯಾವ ಪಕ್ಷವು ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.. ಆದರೆ ಮಂಡ್ಯದಲ್ಲಿ ಮಾತ್ರ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.. ಇಬ್ಬರ ಮಧ್ಯೆಯು ಕೂಡ ಪೈಪೋಟಿ ಏರ್ಪಡುವುದು ಸುಳ್ಳಲ್ಲ.. . ಈ ಬಾರಿ ಮಂಡ್ಯ ಹೈವೋಲ್ಟೇಜ್ ಕಣವಾಗಿದೆ.
ಇದೆಲ್ಲದರ ನಡುವೆ ಚುನಾವಣಾ ಕಣದಿಂದ ಸುಮಲತಾ ಹಿಂದೆ ಸರಿಯುತ್ತಿದ್ದಾರೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿದೆ... ಹೀಗಾಗಿ ಸುಮಲತಾ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಮಂಡ್ಯ ಜನತೆಗೆ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಜನರನ್ನು ದಿಕ್ಕು ತಪ್ಪಿಸಲು ಕೆಲವರು ಈ ರೀತಿಯ ಮಾತುಗಳುನ್ನು ಆಡುತ್ತಿದ್ದಾರೆ.. ಅದಕ್ಕಾಗಿ ಮಂಡ್ಯ ಜನರಲ್ಲಿ ಮನವಿ ಮಾಡಿದ್ದು, ನಾನು ನಿಮ್ಮ ಋಣ ತೀರಿಸಲು ಬದ್ಧಳಾಗಿದ್ದೇನೆ.ನಿಮ್ಮ ಬೆಂಬಲ ನನಗಿರಲಿ. ನಿಮ್ಮ ಪ್ರೀತಿ ಕಾಳಜಿಯೇ ನನಗೆ ಶ್ರೀರಕ್ಷೆ ಅಂತಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ… ನಿಖಿಲ್ ಮತ್ತು ಸುಮಲತಾ ಮಧ್ಯೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.. ಆದರೆ ಮಂಡ್ಯ ಜನತೆಯ ಒಲವು ಯಾರ ಮೇಲಿದೆಯೋ ಗೊತ್ತಿಲ್ಲ..
Comments