ಡಿಕೆ ಶಿವಕುಮಾರ್ ಆಪರೇಷನ್’ಗೆ ಬೆಚ್ಚಿಬಿದ್ದ ಸುಮಲತಾ..!! ಮಂಡ್ಯ ಕಣದಿಂದ ಹಿಂದೆ ಸರಿದ್ರಾ ಅಂಬಿ ಪತ್ನಿ..?
ಲೋಕಸಭಾ ಚುನಾವಣೆಗೆ ಮೂಹೂರ್ತ ಫಿಕ್ಸ್ ಆದ ಮೇಲೆ ಸಾಕಷ್ಟು ಗೊಂದಲುಗಳು ಸೃಷ್ಟಿಯಾಗುತ್ತಿವೆ… ಯಾವ ಅಖಾಡಕ್ಕೆ ಯಾವ ಅಭ್ಯರ್ಥಿ ಎಂಬುದೇ ಇನ್ನೂ ಫೈನಲ್ ಆಗಿಲ್ಲ… ಆಗಲೇ ಪರ ವಿರೋಧಗಳು ಶುರುವಾಗಿ ಬಿಟ್ಟಿವೆ…ಒಂದು ಕಡೆ ಕ್ಯಾಂಪೇನ್ ಶುರುವಾಗಿಯೇ ಬಿಟ್ಟಿದೆ,.. ಮತ್ತೊಂದು ಕಡೆ ಅಭ್ಯರ್ಥಿಯ ವಿರುದ್ದ ಗೋ ಬ್ಯಾಕ್ ಧನಿ ಕೇಳಿಬರುತ್ತಿದೆ. ಮಂಡ್ಯ ಅಖಾಡಕ್ಕೆ ಇಳಿಯಲು ಸಿದ್ದರಾಗುತ್ತಿರುವ ಅಂಬಿ ಪತ್ನಿಗೆ ಬಿಗ್ ಶಾಕ್ ಎದುರಾಗಿದೆ..ಇದೀಗ ಅವರು ಮಂಡ್ಯ ಲೋಕಸಭಾ ಅಖಾಡದಿಂದ ಹಿಂದೆ ಸರಿಯಲು ಚಿಂತನೆ ನಡೆಸುತ್ತಿದ್ದರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ..
ಡಿಕೆ ಶಿವಕುಮಾರ್ ನಡೆಸಿದ ಆಪರೇಷನ್ ಸುಮಲತಾ ಅಂಬರೀಶ್ ಬೆಚ್ಚಿಬಿದ್ದಿದ್ದಾರೆ ಎನ್ನಲಾಗುತ್ತಿದೆ…, ಸುಮಾರು 50 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ನಿಖಿಲ್ ಪರವಾಗಿ ಬೆಂಬಲ ಘೋಷಣೆಯನ್ನು ಸಾರುತ್ತಿದ್ದಾರೆ. ಇಂದು ಸಂಜೆ ಸುಮಲತಾ ಅಂಬರೀಶ್ ಈ ಬಗ್ಗೆ ಅಂತಿಮ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ..ಮಂಡ್ಯ ಲೋಕಸಭಾ ಅಖಾಡ ಬೇಸಿಗೆಯ ಬಿಸಿಲಿನ ಆಗೆಯೇ ದಿನದಿಂದ ದಿನಕ್ಕೆ ಅದರ ಕಾವು ಹೆಚ್ಚಾಗುತ್ತಿದೆ.
ಒಂದು ಕಡೆ ಮೈತ್ರಿ ಸರ್ಕಾರದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ… ಆದರೆ ಸುಮಲತಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.. ಆದರೆ ಟಿಕೆಟ್ ಕೈ ತಪ್ಪುತ್ತದೆ ಎಂದ ತಿಳಿದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲ್ಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು.. ಆದರೆ ಡಿಕೆ ಶಿವಕುಮಾರ್ ತಮ್ಮ ಉಳಿವಿಗಾಗಿ ಸುಮಲತಾ ಅಖಾಡಕ್ಕೆ ಇಳಿಯದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.. ಇದರ ಬಗ್ಗೆ ಸುಮಲತಾ ಅಂಬರೀಶ್ ಅವರು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments