ಸುಮಲತಾ V/S ನಿಖಿಲ್ ನಡುವೆ ಲೋಕ ಸಮರ..!! ಇದರ ನಡುವೆ ಬಿಜೆಪಿಯ ಬಿಗ್ ಟ್ವಿಸ್ಟ್..!! ಬಿಜೆಪಿ ಅಭ್ಯರ್ಥಿ ಇವರೇನಾ..!?
ಅದ್ಯಾಕೋ ಗೊತ್ತಿಲ್ಲ ಮಂಡ್ಯ ಲೋಕಸಭಾ ಅಖಾಡ ತಣ್ಣಗೆ ಆಗುವ ಮುನ್ಸೂಚನೆ ನೆ ಕಾಣುತ್ತಿಲ್ಲ… ದಿನದಿಂದ ದಿನಕ್ಕೆ ಅಖಾಡದ ಕಾವು ರಂಗೇರುತ್ತಿದೆ. ಮಂಡ್ಯ ಅಕ್ಷರಃ ಹೈ ವೋಲ್ಟೇಟ್ ಅಖಾಡವಾಗಿ ಪರಿಣಮಿಸುತ್ತಿದೆ… ಸುಮಲತಾ ವರ್ಸಸ್ ನಿಖಿಲ್ ನಡುವೆ ಬಿಗ್ ಪೈಟ್ ನಡೆಯುತ್ತಿದೆ.. ಇವರಿಬ್ಬರಲ್ಲಿ ಯಾರು ಅಖಾಡಕ್ಕೆ ಇಳಿಸುವುದು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.. ಇದರ ಹಿನ್ನಲೆಯಲ್ಲಿಯೇ ಬಿಜೆಪಿ ಎಂಟ್ರಿ ಕೊಡಲು ಎಲ್ಲಾ ರೀತಿಯ ಫ್ಲ್ಯಾನ್’ಗಳನ್ನು ಮಾಡಿಕೊಳ್ಳುತ್ತಿದೆ.
ದೋಸ್ತಿ ಅಭ್ಯರ್ಥಿಯ ಹಿನ್ನಲೆಯಲ್ಲಿಯೇ ಮಂಡ್ಯ ಅಖಾಡಕ್ಕೆ ಬಿಜೆಪಿಯಿಂದ ಹೊಸ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮಾಜಿ ಪರಿಷತ್ ಸದಸ್ಯ ಅಬ್ದುಲ್ ಅಜೀಂ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಅಬ್ದುಲ್ ಅಜೀಂ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಇದ್ದರು. ಆಗ ಪರಿಷತ್ ಸದಸ್ಯರಾಗಿದ್ದರು. ಈಗ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ.
ಅವರು ಮಂಡ್ಯ ಅಖಾಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.. ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು, ಕಾಂಗ್ರಸ್ಸಿನ ತಂತ್ರವೇನು ಎಂದು ತಿಳಿದುಕೊಂಡು ಬಿಜೆಪಿ ಹೆಜ್ಜೆ ಹಿಡಲು ಪ್ಲಾನ್ ಮಾಡಿಕೊಂಡಿದೆ ಆದರೆ ಬಿಜೆಪಿ ಪಕ್ಷದವರು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ…
ಇದೇ ಹಿನ್ನಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅಬ್ದುಲ್ ಅಜೀಂ, ನಾನು ಮೊದಲು ಮಂಡ್ಯದವನು ಆಮೇಲೆ ಭಾರತದವನು ಎಂದಿದ್ದಾರೆ.. ನಿಜ ಹೇಳಬೇಕು ಅಂದ್ರೆ ನಾನು ನಿಜವಾದ ಹೀರೋ, ನನಗೆ ಎಲ್ಲಾ ಅರ್ಹತೆಗಳಿವೆ. ಮಂಡ್ಯದಲ್ಲಿ ನಮ್ಮ ಕುಟುಂಬಕ್ಕೆ 600 ವರ್ಷಗಳ ಇತಿಹಾಸವಿದೆ. ನನಗೆ ಮಂಡ್ಯದ ಜನತೆಯನ್ನು ಹೇಗೆ ಒಲಿಸಿಕೊಳ್ಳಬೇಕು ಎಂಬುದು ತಿಳಿದಿದೆ ಎಂದರು..
Comments