ಕೊನೆಗೂ ಜೆಡಿಎಸ್ ಪಾಲಾಯ್ತು ಈ 8 ಕ್ಷೇತ್ರಗಳು..!! ಯಾವುವು ಗೊತ್ತಾ..?

ಸದ್ಯಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಲೋಕಸಭಾ ಅಖಾಡಕ್ಕೂ ಕುಡ ಮೈತ್ರಿ ಮಾಡಿಕೊಂಡೆ ಸ್ಪರ್ಧೆ ಮಾಡುವ ಅನಿವಾರ್ಯ ಬಂದು ಬಿಟ್ಟಿದೆ… ಜೆಡಿಎಸ್ ಕೇಳುವ ಜಿಲ್ಲೆಗಳನ್ನು ಕಾಂಗ್ರೆಸ್ ಬಿಟ್ಟುಕೊಡುತ್ತಾ ಅಥವಾ ಇಲ್ಲವ ಎಂಬ ಗೊಂದಲ ಸಾಮಾನ್ಯವಾಗಿ ಇದ್ದೆ ಇತ್ತು.. ಸದ್ಯಕ್ಕೆ ಲೋಕಸಭಾ ಚುನಾವಣೆಗೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ಗೊಂದಲ ಇನ್ನು ಇತ್ಯರ್ಥವಾಗದಿದ್ದರೂ, ಸದ್ಯಕ್ಕೆ ಕಾಂಗ್ರೆಸ್ ಜೆಡಿಎಸ್ ಗೆ 8 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ ಎಂದು ಹೇಳಲಾಗುತ್ತಿದೆ..
ಮೊನ್ನೆಯಷ್ಟೆ ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದ ದೇವೇಗೌಡರು ತಮಗೆ ಬೇಕಾದ 8 ಕ್ಷೇತ್ರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಈ ಮೊದಲು 7 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತ ಎನ್ನಲಾಗಿತ್ತು.. ಒಂದು ವೇಳೆ 12 ಕ್ಷೇತ್ರ ಆಗದಿದ್ದರೆ 10 ಕ್ಷೇತ್ರಗಳನ್ನಾದರೂ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ದೇವೇಗೌಡರು ಪಟ್ಟು ಹಿಡಿದಿದ್ದರು.
ಅವರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸದ್ಯಕ್ಕೆ 8 ಕ್ಷೇತ್ರಗಳನ್ನು ಫೈನಲ್ ಮಾಡಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ನ ಭದ್ರ ಕೋಟೆಯಂತಿರುವ ಮಂಡ್ಯ, ಹಾಸನ ಸೇರಿದಂತೆ ಶಿವಮೊಗ್ಗ, ತುಮಕೂರು, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಉತ್ತರ, ವಿಜಯಪುರ, ಮೈಸೂರು ಕ್ಷೇತ್ರಗಳನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ ಎನ್ನಲಾಗಿದೆ.
Comments