ದೋಸ್ತಿ ಸರ್ಕಾರದ ಮಾಸ್ಟರ್ ಫ್ಲ್ಯಾನ್..!! ಸುಮಲತಾಗೆ ಬೇರೆ ಕ್ಷೇತ್ರದ ಆಫರ್ ಕೊಟ್ಟ ಕುಮಾರಣ್ಣ..?
ಮಂಡ್ಯ ಲೋಕಸಬಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ… ಸುಮಲತಾ ಗೆ ಟಿಕೇಟ್ ಸಿಗಲ್ಲ ಎಂದು ತಿಳಿದ ಮಂಡ್ಯ ಜನ ಸಮ್ಮಿಶ್ರ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.. ಮಂಡ್ಯ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಬಿಟ್ಟುಕೊಡುವುದಿಲ್ಲ ಆ ಕ್ಷೇತ್ರ ನಮಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.. ಹಾಗಾಗಿ ಈ ಹಿನ್ನಲೆಯಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಬಹುತೇಕ ಖಚಿತವಾಗಿದೆ. ಒಂದು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಸೋಲು ನಮಗೆ ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತ ದೋಸ್ತಿ ನಾಯಕರು ಸುಮಲತಾ ಅವರಿಗೆ ಬೇರೆ ಕ್ಷೇತ್ರ ಕೊಡಲು ನಿರ್ಧಾರ ಮಾಡಿದ್ದಾರಂತೆ..
ನೆನ್ನೆ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡೋಣ.. ಅಲ್ಲಿ ಬೇಕಾದರೆ ಸುಮಲತಾ ಅಂಬರೀಶ್ ನಿಂತು ಗೆಲ್ಲಲಿ ಎಂಬುದರ ಬಗ್ಗೆ ಚರ್ಚೆಯಾಗಿದೆ.. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಅಖಾಡಕ್ಕೆ ಇಳಿಸಿ ಎಲ್ಲಿ ಗೆಲ್ಲಿಸಲೇ ಬೇಕು ಎಂಬುದು ಕುಮಾರಸ್ವಾಮಿಯವರ ಪ್ಲಾನ್…ಒಟ್ಟಾರೆಯಾಗಿ ಜೆಡಿಎಸ್ ಗೆ ಮಂಡ್ಯ ಭದ್ರಬುನಾದಿಯಂತೆ ಇದೆ.. ಒಂದು ವೇಳೆ ಅಲ್ಲಿ ಜೆಡಿಎಸ್ ಸೋತರೆ ಮುಂದಿನ ಚುನಾವಣೆಗೆ ಒಡೆತ ಬೀಳಲಿದೆ ಎನ್ನುವುದನ್ನು ಮನಗಂಡ ಜೆಡಿಎಸ್ ಪಕ್ಷವು ಸುಮಲತಾ ಅವರನ್ನು ಕಣದಿಂದ ಹಿಂದೆ ಸರಿಸಲು ಯಾವೆಲ್ಲಾ ಫ್ಲಾನ್ ಮಾಡಬಹುದೋ ಅದನ್ನೆಲ್ಲಾ ಮಾಡಲಾಗುತ್ತಿದೆ… ಅದಕ್ಕಾಗಿ ಮೈಸೂರು ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟುಕೊಡೋಣ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
Comments