ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್..!!ಯಾವಾಗ ಗೊತ್ತಾ..?

ಮುಂಬರುವ ಲೋಕಸಭಾ ಚುನಾವಣೆಯ ಅಖಾಡಕ್ಕೆ ಎಲ್ಲಾ ಪಕ್ಷದವರು ಬಲಿಷ್ಟ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಭರದಲ್ಲಿ ಇದ್ದಾರೆ… ಆದರೆ ಚುನಾವಣೆ ಯಾವಾಗ ಎಂಬುದೇ ಇನ್ನೂ ಘೋಷಣೆಯಾಗಿಲ್ಲ… 2019ರ ಲೋಕಸಭಾ ಚುನಾವಣೆಯ ಮತದಾನ ದಿನಾಂಕವನ್ನು ಮುಂಬರುವ ಮಂಗಳವಾರದೊಳಗೆ ಚುನಾವಣಾ ಆಯೋಗ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. 16ನೇ ಲೋಕಸಭೆಯ ಅವಧಿ ಜೂ.3ರಂದು ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ದಿನಾಂಕ ಹಾಗೂ ಮತ ಯಂತ್ರಗಳ ಲಭ್ಯತೆ ಕುರಿತು ಅಂತಿಮ ಸುತ್ತಿನ ಪರಿಶೀಲನೆಯಲ್ಲಿ ಆಯೋಗ ಬ್ಯುಸಿಯಾಗಿದೆ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ 7ರಿಂದ 8 ಹಂತಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಸಾಕಷ್ಟು ಕಾಲಾವಕಾಶ ಇರುವುದರಿಂದ ಎಲ್ಲಾ ಪಕ್ಷದವರು ಕೂಡ ನಿಧಾನವಾಗಿ ಯೋಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ… ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಸೂಕ್ತ.. ಮತದಾರರು ಯಾರ ಕಡೆ ಹೆಚ್ಚು ಒಲವು ತೋರಿಸುತ್ತಾರೆ ಎಂವುದೆಲ್ಲಾವನ್ನು ಪರಿಶೀಲಿಸಿ ಅಭ್ಯರ್ಥಿಯ ಆಯ್ಕೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಜೊತ ಜೊತೆಯಲ್ಲಿಯೇ ಅರುಣಾಚಲಪ್ರದೇಶ, ಒಡಿಶಾ, ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ ನಡೆಯಬೇಕಾಗಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಯಾಗಿದ್ದು, ಆರು ತಿಂಗಳೊಳಗಾಗಿ ಅಂದರೆ ಮುಂದಿನ ಮೇ ಒಳಗೆ ಚುನಾವಣೆ ನಡೆಸಬೇಕಾಗಿದೆ…ಅಷ್ಟರೊಳಗೆ ಎಲ್ಲಾ ಪಕ್ಷದವರು ಕೂಡ ಅಭ್ಯರ್ಥಿಯ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ
Comments