‘ಮಂಡ್ಯದಿಂದ go back ನಿಖಿಲ್ ಕುಮಾರಸ್ವಾಮಿ’ ಅಭಿಯಾನ..!! ಹಾಗಾದ್ರೆ ಅಖಾಡದಿಂದ ಹಿಂದೆ ಸರಿದ್ರಾ ಸಿಎಂ ಪುತ್ರ..!!!

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿತ್ತು… ಇದರ ಸುಮಲತಾ ಕೂಡ ಪೈಪೋಟಿಗೆ ಬಿದ್ದಿದ್ದರು.. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಮಲತಾ ಗೆ ಟಿಕೇಟ್ ಸಿಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಒಂದು ವೇಳೆ ಸಿಗದೆ ಇದ್ದರೆ ಪಕ್ಷೇತರ ವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ…
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟಿ ಸುಮಲತಾ ಅಂಬರೀಷ್ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಮೊದಲೇ ಜಿದ್ದಾಜಿದ್ದಿಗೆ ಬಿದ್ದ ಹಾಗೆ ಕಾಣುತ್ತಿದೆ…. ಇದರ ಹಿನ್ನಲೆಯಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಮಂಡ್ಯದಿಂದ ಗೋ ಬ್ಯಾಕ್ ನಿಖಿಲ್’ ಎಂಬ ಅಭಿಯಾನ ಪ್ರಾರಂಭವಾಗಿದೆ…, ಮಂಡ್ಯದ ಜನ ನಿಖಿಲ್ ಅಖಾಡಕ್ಕೆ ಇಳಿಯುವುದರ ಬಗ್ಗೆ ಸಂತಸವನ್ನು ವ್ಯಕ್ತ ಪಡಿಸಿದ್ದರು… ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯವಾಗಿರುತ್ತದೆ… ರಾಜಕೀಯದಲ್ಲಿ ಎಲ್ಲರೂ ನಮ್ಮ ಪರವಾಗಿ ಇರಬೇಕು ಎಂದಿಲ್ಲ, ಮಂಡ್ಯ ಜನರು ನಿಖಿಲ್ ಅಭ್ಯರ್ಥಿಯಾಗಬೇಕೆಂದು ಬಯಸಿದ್ದಾರೆ. ಮೇ ತಿಂಗಳಲ್ಲಿ ನಡೆದ ಮಂಡ್ಯದ ಚುನಾವಣೆಯಲ್ಲಿ ಸಕ್ರೀಯವಾಗಿ ನಿಖಿಲ್ ಪಾಲ್ಗೊಂಡಿದರು, ಮಂಡ್ಯದ ಜನರು ನಿಖಿಲ್ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ…ಒಟ್ಟಾರೆಯಾಗಿ ನಿಖಿಲ್ ಮಂಡ್ಯದಿಂದ ಅಖಾಡಕ್ಕೆ ಇಳಿಯಬಾರದು ಎಂಬುದು ಕೆಲವರ ಅಭಿಪ್ರಾಯವಾಗಿದೆ..
Comments