ಅಖಾಡಕ್ಕೆ ಇಳಿಯಲು ಸಿದ್ಧರಾದ್ರ ಯೋಧ ಗುರು ಪತ್ನಿ..!! ಪಕ್ಷ ಯಾವುದು ಗೊತ್ತಾ..?

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಒಂದು ಕಡೆ ರಾಜಕೀಯದ ಘಟಾನುಘಟಿಗಳ ನಡುವೆ ನೇರಾ ನೇರಾ ಪೈಪೋಟಿ ಏರ್ಪಟಿದ್ರೂ, ಇದೀಗ ಮಂಡ್ಯ ಅಖಾಡದಿಂದ ಮತ್ತೊಂದು ಅಚ್ಚರಿ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಇದರ ಮಧ್ಯೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ನಟಿ ಸುಮಲತಾ ಅವರಿಗೆ ಒಂದೊಮ್ಮೆ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ, ಮತ್ತೊಂದು ಕಡೆ ದೊಡ್ಡಗೌಡರ ಕುಟುಂಬದ ಕುಡಿ ನಿಖಿಲ್ ಪಾಲಿಟಿಕ್ಸ್'ಗೆ ಮೊದಲ ಹೆಜ್ಜೆ ಇಟ್ಟರೇ, ಇವರಿಬ್ಬರಿಗೂ ಫೇಸ್ ಟೂ ಪೇಸ್ ಎದುರಾಳಿಯಾಗಿ ಈ ಅಭ್ಯರ್ಥಿ ಬಹುದೊಡ್ಡ ಫೈಟರ್ ಆಗೊದ್ರಲ್ಲಿ ಸಂಶಯವೇ ಇಲ್ಲ.
ಮಂಡ್ಯ ಅಖಾಡದಲ್ಲಿ ಆಗೊಮ್ಮೆ ಅವರು ಸ್ಪರ್ಧಿಸುವುದೇ ಆದ್ರು ಲೋಕಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಕೌತುಕವಾಗೋದ್ರಲ್ಲಿ ಅನುಮಾನವೇ ಇಲ್ಲ. ಮಂಡ್ಯ ಲೋಕಸಭಾ ಚುನಾವಣೆಯ ಅಖಾಡ ಇದೀಗ ಮತ್ತಷ್ಟು ರಂಗೇರುವ ರೀತಿಯಲ್ಲಿ ಕಾಣುತ್ತಿದೆ.ಮಂಡ್ಯ ಕ್ಷೇತ್ರವನ್ನು ಹೈ ವೊಲ್ಟೇಜ್ ಅಖಾಡ ಎಂದರೆ ತಪ್ಪಾಗುವುದಿಲ್ಲ… ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಸಕ್ಕರೆನಾಡಿನಲ್ಲಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ.. ಅಷ್ಟೆ ಅಲ್ಲದೆ ಇದೆಲ್ಲದರ ನಡುವೆ ಇತ್ತೀಚೆಗೆ ಪುಲ್ವಾಮ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಸಿ.ಆರ್.ಪಿ.ಎಫ್ ಯೋಧ ಗುರು ಅವರ ಪತ್ನಿ ಕಲಾವತಿಯವರನ್ನು ಮಂಡ್ಯ ಅಖಾಡಕ್ಕೆ ಇಳಿಸುವಂತೆ ಉಮೇದುದಾರಿಕೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ..
ಬಹುಜನ ಸಮಾಜ ಪಕ್ಷದ ಮೂಲಕ ಯೋಧ ಗುರು ಪತ್ನಿ ಕಲಾವತಿ ಅವರನ್ನು ಮಂಡ್ಯ ಕ್ಷೇತ್ರದಿಂದ ಅಖಾಎಕ್ಕೆ ಇಳಿಸಬೇಕು ಎಂಬ ಪ್ರಸ್ತಾವನೆಯನ್ನು ಖ್ಯಾತ ಚಿಂತಕ ಮತ್ತು ಹಿಂದುಳಿದ ವರ್ಗಗಳ ನಾಯಕ ದ್ವಾರಕಾನಾಥ್ ಅವರು ಬಿ.ಎಸ್.ಪಿ. ರಾಜ್ಯಾಧ್ಯಕ್ಷರಿಗೆ ಪತ್ರದ ಮೂಲಕ ವಿನಂತಿ ಮಾಡಿದ್ದಾರೆಂದು ತಿಳಿದುಬಂದಿದೆ. ಒಟ್ಟಾರೆ ಇಲ್ಲಿಯೂ ಕೂಡ ಜಾತಿ ರಾಜಕಾರಣ ಮಾಡಲು ಸಿದ್ದರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..
Comments