ಕುಮಾರಸ್ವಾಮಿ ಸಿಎಂ ಸ್ಥಾನದ ಬಗ್ಗೆ ಭವಿಷ್ಯ ನುಡಿದ ಸಚಿವ ರೇವಣ್ಣ..!! ಹಾಗಾದ್ರೆ ಸಿಎಂ ಅಧಿಕಾರವಧಿ ಎಷ್ಟು ವರ್ಷ..?

ಯಾಕೋ ಸಮ್ಮಿಶ್ರ ರಚನೆಯಾದ ದಿನದಿಂದಲೂ ಕೂಡ ಸರ್ಕಾರಕ್ಕೆ ಒಂದಲ್ಲ ಒಂದು ಕಗ್ಗಂಟುಗಳು ಎದುರಾಗುತ್ತಲೇ ಇವೆ… ಆದರೆ ಸರ್ಕಾರ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ… ಕುಮಾರಸ್ವಾಮಿ ದೋಸ್ತಿ ಸರ್ಕಾರಕ್ಕೆ ಅತೃಪ್ತ ಶಾಸಕರ ರಾಜೀನಾಮೆ ತಲೆ ನೋವಾಗಿ ಪರಿಣಮಿಸಿದೆ.. ಇದೇ ಹಿನ್ನಲೆಯಲ್ಲಿ ಯಾರು ರಾಜೀನಾಮೆ ಕೊಟ್ಟರು ಸರ್ಕಾರಕ್ಕೆ ಏನೂ ಆಗುವುದಿಲ್ಲ. ಕುಮಾರಸ್ವಾಮಿ ಐದು ವರ್ಷ ಅಧಿಕಾರ ನಡೆಸು ತ್ತಾರೆ. ಈ ಬಾರಿ ದೇಶದಲ್ಲಿ ರಾಜಕೀಯ ಕ್ರಾಂತಿ ಆಗುವುದು ಖಚಿತ ಎಂದು ಸಚಿವ ಹೆಚ್.ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೇವಣ್ಣ, ಪ್ರಸ್ತುತ ರಾಜಕೀಯ ವಿದ್ಯಮಾನಗಳಿಂದ ರಾಜ್ಯದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಿಜೆಪಿಗೆ ಯಾವುದೇ ಶಾಸಕರು ಹೋಗುವುದಿಲ್ಲ. ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ಹೋಗುವುದು ಮೊದಲೇ ತೀರ್ಮಾನ ಆಗಿತ್ತು. ಅವರು ಹೋಗಿದ್ದಾರೆ. ಅದನ್ನು ಹೊರತುಪಡಿಸಿ ಮತ್ಯಾರು ಪಕ್ಷ ಬಿಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ಸಮಯದಲ್ಲಿ ಯಾರೋ ಬರೆದುಕೊಟ್ಟ ಚೀಟಿ ಓದುತ್ತಾರೆ. ಅವರು ಚೀಟಿ ಓದುವ ಬದಲು ಕೇಂದ್ರದ ಅಧಿಕಾರಿಯನ್ನು ಕಳುಹಿಸಿ ಮಾಹಿತಿ ಪಡೆಯದುಕೊಳ್ಳಲಿ ಎಂದು ಸಚಿವ ರೇವಣ್ಣ ಮೋದಿಗೆ ತಿರುಗೇಟು ನೀಡಿದ್ದಾರೆ.
Comments