ಸ್ಯಾಂಡಲ್’ವುಡ್ ನ ‘ರೇಸ್ ಕುದುರೆ’ಗಳು ಈ ಅಭ್ಯರ್ಥಿಯ ಪರ ಪ್ರಚಾರ ಮಾಡ್ತಾರಂತೆ…!! ಸುಮಲತಾ ಅಥವಾ ನಿಖಿಲ್..?

ಕಳೆದ ಎಲ್ಲಾ ಲೋಕಸಭಾ ಚುನಾವಣೆಗಿಂತ ಈ ಬಾರಿಯ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿಯೇ ಇದೆ… ಅದರಲ್ಲೂ ಮಂಡ್ಯ ಕ್ಷೇತ್ರದ ಕಾವು ದಿನದಿಂದ ದಿನಕ್ಕೆ ರಂಗೇರುವುದರ ಜೊತೆಗೆ ಕಾವು ಕೂಡ ಹೆಚ್ಚಾಗುತ್ತಿದೆ..ಯಾವ ಅಭ್ಯರ್ಥಿಗೆ ಟಿಕೇಟ್ ಸಿಗುತ್ತದೆ ಎಂಬುದು ಮಾತ್ರ ತಿಳಿದುಬಂದಿಲ್ಲ.. ಮಾಹಿತಿಯ ಪ್ರಕಾರ ನಿಖಿಲ್ ಗೆ ಮಂಡ್ಯ ಟಿಕೇಟ್ ಫಿಕ್ಸ್ ಎಂಬುದು ಬಹುತೇಕ ಖಚಿತವಾಗಿದೆ.. ಹಾಗಾಗಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಿಂತುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.. ಕೇವಲ ರಾಜಕೀಯ ನಾಯಕರಿಗಷ್ಟೆ ಅಲ್ಲದೆ ಸಿನಿಮಾರಂಗದ ಮಂದಿಗೂ ಕೂಡ ಮಂಡ್ಯ ಅಖಾಡ ಮೇಲೆ ಕಣ್ಣು ಬಿದ್ದಿದೆ..
ಒಂದು ಕಡೆ ನಿಖಿಲ್ ಮತ್ತೊಂದು ಕಡೆ ಸುಮಲತಾ…ಒಂದು ವೇಳೆ ಇಬ್ಬರು ಮುಖಾಮುಖಿಯಾದರೆ ಇಬ್ಬರ ಮಧ್ಯೆ ರಾಜಕೀಯ ಯುದ್ದವೇ ನಡೆಯಲಿದೆ… ಹಾಗೇನಾದರೂ ಇಬ್ಬರು ಒಂದೆ ಕ್ಷೇತ್ರದಿಂದ ಅಖಾಡಕ್ಕೆ ಇಳಿದರೆ ಕನ್ನಡದ ಸ್ಟಾರ್ ನಟರು ಯಾರ ಕಡೆ ಪ್ರಚಾರ ಮಾಡುತ್ತಾರೆ ಎಂಬುದೆ ದೊಡ್ಡ ಯಕ್ಷ ಪ್ರಶ್ನೆ ಯಾಗಿದೆ… ದರ್ಶನ್…ಯಶ್…ಸುದೀಪ್ ಈ ಮೂವರಲ್ಲಿ ಯಾರು ಯಾರ ಪರ ಪ್ರಚಾರ ಮಾಡುತ್ತಾರೆ ಎಂಬ ಗೊಂದಲ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತಾ ಇತ್ತು…
ಇದೀಗ ಆ ಗೊಂದಲಕ್ಕೆ ತೆರೆ ಎಳೆದಂತಾಗಿದೆ.. 'ಯಜಮಾನ' ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ರಾಜಕೀಯ ವಿಚಾರವಾಗಿ ಉತ್ತರ ನೀಡಿದ ದರ್ಶನ್ ತಾವು ನಟಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ...
ಈಗ ಸುದೀಪ್ ಹಾಗೂ ಯಶ್ ನಿರ್ಧಾರ ಏನಾಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಒಂದು ಕಡೆ ಅಂಬಿ ಕುಟುಂಬಕ್ಕೆ ಆಪ್ತರಾಗಿರುವ ಸುದೀಪ್, ಯಶ್ ಅದೇ ರೀತಿ ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಅವರ ಜೊತೆಗೂ ಒಳ್ಳೆಯ ಬಾಂದವ್ಯ ಇಟ್ಟುಕೊಂಡಿದ್ದಾರೆ.. ಹೀಗಾಗಿ ಯಾರ ಪರ ಪ್ರಚಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments