ಮಾಜಿ ಶಾಸಕರಿಂದ ಹೊಸ ಬಾಂಬ್..! ಕಾಂಗ್ರೆಸ್ ಸಂಸದನ ಸಿಡಿ ಬಿಡುಗಡೆ ಮಾಡ್ತಾರಂತೆ ಈ ಶಾಸಕ..!!!
ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಶಾಸಕರ ಮಧ್ಯೆ ವೈಮನಸ್ಸು ಉಂಟಾಗುತ್ತಿದೆ… ಟಿಕೇಟ್ ಆಕಾಂಕ್ಷಿಗಳು ಟಿಕೇಟ್ ಸಿಗುವುದಿಲ್ಲ ಎಂಬ ಸುಳಿವು ಸಿಕ್ಕರೆ ಸಾಕು ಬೇರೆಬೇರೆ ರೀತಿಯಲ್ಲೆಲ್ಲಾ ಫ್ಲಾನ್ ಮಾಡಿ ಟಿಕೇಟ್ ಪಡೆಯಲು ಸಾಕಷ್ಟು ಹರಸಾಹಸವನ್ನೆ ಪಡುತ್ತಾರೆ… ರಾಜ್ಯ ರಾಜಕಾರಣದಲ್ಲಿ ವಿಡಿಯೋ ಸಿಡಿ ಬಿಡುಗಡೆ ಮಾಡುವುದು ಹೊಸದೇನಲ್ಲ… ಇದೀಗ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೊಸ ಬಾಂಬ್’ವೊಂದನ್ನು ಸಿಡಿಸಿದ್ದಾರೆ… ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಲಿ ಬಳಿಕ ಸಂಸದ ಕೆ.ಎಚ್. ಮುನಿಯಪ್ಪನವರ ವಿಡಿಯೋ ಸಿಡಿ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ಸಂಸದ ಕೆ.ಹೆಚ್. ಮುನಿಯಪ್ಪ ವಿರುದ್ಧ ಮಾಜಿ ಶಾಸಕ ಮಂಜುನಾಥ್ ಕಿಡಿಕಾರಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಲಿ ಈ ಬಾರಿ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇತ್ತೀಚೆಗೆ 34 ನಿಮಿಷಗಳ ವಿಡಿಯೋಗೆ ಕತ್ತರಿ ಹಾಕಿ ಕೇವಲ 13 ನಿಮಿಷ ವಿಡಿಯೋ ಬಿಡುಗಡೆ ಮಾಡಿದ್ದರು. ಸದ್ಯ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಕೊತ್ತೂರು ಮಂಜುನಾಥ್ ಹೇಳಿಕೆ ಬಾರೀ ಚರ್ಚೆಯಾಗುತ್ತಿದೆ. ರಾಜಕೀಯ ವಲಯದಲ್ಲಿ ಇತ್ತಿಚಿಗೆ ಈ ಸಿಡಿ ಬಿಡುಗಡೆ ಹೆಚ್ಚು ಚರ್ಚೆಗೆ ಗುರಿಯಾಗುತ್ತಿದೆ… ಲೋಕಸಭಾ ಚುನಾವಣೆ ಬರುವುದರೊಳಗೆ ಯಾವಾಗ ಏನು ಆಗುತ್ತದೆ ಎಂಬುದೆ ತಿಳಿಯುವುದಿಲ್ಲ…
Comments