ಸುಮಲತಾ ಅಂಬರೀಶ್ ಅವರನ್ನು ಫಾಲೋ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ…!! ಯಾವ ವಿಷ್ಯದಲ್ಲಿ ಗೊತ್ತಾ..?

ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ಅಭ್ಯರ್ಥಿಗಳ ಆಯ್ಕೆ ಜೋರಾಗಿಯೇ ನಡೆಯುತ್ತಿದೆ.. ದೋಸ್ತಿ ಸರ್ಕಾರದಿಂದ ನಿಖಿಲ್ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ಟಿಕೇಟ್ ನಿರಾಕರಣೆ ಮಾಡಿದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲ್ಲು ತಯಾರಿ ಮಾಡಿ ಕೊಳ್ಳುತ್ತಿದ್ದಾರೆ… ಚುನಾವಣೆಯ ಹಿನ್ನಲೆಯಲ್ಲಿಯೇ ಸುಮಲತಾ ಮಂಡ್ಯದಲ್ಲಿ ಮನೆ ಮಾಡುವುದಾಗಿ ತಿಳಿಸಿದರು.. ಇದೀಗ ನಿಖಿಲ್ ಕೂಡ ಮಂಡ್ಯದಲ್ಲಿ ಮನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಮಂಡ್ಯ ಲೋಕಸಭಾಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿರುವ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಲು ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ...ನಿನ್ನೆ ಸುಮಲತಾ ಅವರು ಮಂಡ್ಯದಲ್ಲಿ ನೆಲೆಸಿರುವುದಾಗಿ ತಿಳಿಸಿದರು… ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಸಂಭವ್ಯ ಅಭ್ಯರ್ಥಿಯಾದ ನಟ ನಿಖಿಲ್ ಕುಮಾರಸ್ವಾಮಿ ಅವರು ಕೂಡ ನಾನು ಮಂಡ್ಯದಲ್ಲಿಯೇ ಇರುತ್ತೇನೆ ಎಂದು ಹೇಳಿದ್ದು, ಇದೀಗ ಮನೆ ಮಾಡಲು ಮುಂದಾಗಿದ್ದಾರೆ. ಮಂಡ್ಯದಲ್ಲಿ ಕೃಪಿ ಜಮೀನನ್ನು ಖರೀದಿಸಿ ಮನೆ ನಿರ್ಮಾಣ ಮಾಡಲು ನಿರ್ಧರಿಸಿದ್ದು ಅದಕ್ಕಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..
Comments