ಮಾಜಿ ಸಿಎಂ ಸಿದ್ದರಾಮಯ್ಯಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷದವರು ಸಿದ್ದತೆಯನ್ನು ನಡೆಸುತ್ತಿದ್ದಾರೆ.. ಆದರೆ ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಮತ್ತೊಂದು ಸಂಕಷ್ಟ ಎದುರಾಗಿರುವ ಆಗಿದೆ… ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಸಿದ್ದರಾಮಯ್ಯ ವಿರುದ್ದ ಸಿಡಿದೇಳುತ್ತಾರ ಎಂಬ ಅನುಮಾನ ಬರಲು ಪ್ರಾರಂಭವಾಗಿದೆ.. ಮೊದಲಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ಸುಧಾಕರ್ ಗೆ ನೀಡಲಾಗಿತ್ತು ಆದರೆ, ಸುಪ್ರೀಂ ಕೋರ್ಟ್ ನ ಮಾನದಂಡದಂತೆ ಡಾ. ಸುಧಾಕರ್ ಅವರ ಅಧ್ಯಕ್ಷ ಸ್ಥಾನ ತಡೆ ಹಿಡಿದಿದ್ದರು.
ಸುಧಾಕರ್ ಸಿಎಂ ಮೇಲೆ ಅಸಮಾಧಾನಗೊಂಡಿದ್ದಾರೆ. ಈ ವಿಷಯದ ಹಿಂದೆ ಸಿಎಂ ಕುಮಾರಸ್ವಾಮಿಯವರು ಇರಬಹುದೇನೋ ಎಂಬ ಅನುಮಾನ ಅವರಿಗೆ ಇದೆ… ಸುಧಾಕರ್ ಸ್ವಲ್ಪದಿನಗಳ ಹಿಂದೆ ಸರ್ಕಾರದ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಿಡುವ ಮನಸ್ಸುನ್ನು ಕೂಡ ಮಾಡಿದ್ದರು.. ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಡಾ. ಸುಧಾಕರ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಅಧಿಕೃತವಾಗಿ ಮಂಡಳಿ ಅಧ್ಯಕ್ಷ ಸ್ಥಾನ ಬೇರೆಯವರ ಪಾಲಾಗಿದೆ ಹೀಗಾಗಿ ಸುಧಾಕರ್ ಮತ್ತೆ ಅಸಮಾಧಾನ ಮಾಡಿಕೊಂಡು ಪಕ್ಷ ತೊರೆಯುತ್ತಾರ ಅಥವಾ ಸಿದ್ದರಾಮಯ್ಯ ವಿರುದ್ದ ತಿರುಗಿ ಬೀಳ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ… ಒಟ್ಟಿನಲ್ಲಿ ದೋಸ್ತಿ ಸರ್ಕಾರದ ವಿರುದ್ದ ತಿರುಗಿ ಬಿದ್ದರೂ ಕೂಡ ಎಂಬ ಪ್ರಶ್ನೆ ಮೂಡುತ್ತಿದೆ.
Comments