ನಟಿ ಸುಮಲತಾ ಅಂಬರೀಶ್ ಬಿಜೆಪಿಗೆ..!?
ವಿಧಾನಸಭಾ ಚುನಾವಣಾ ಸಮರಕ್ಕಿಂತ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ…ಅದರಲ್ಲೂ ಮಂಡ್ಯ ಲೋಕಸಭಾ ಅಖಾಡ ಮಾತ್ರ ಬಿಸಿಲಿನ ಬೇಗೆಯ ರೀತಿ ಕಾವು ಹೆಚ್ಚಾಗುತ್ತಲೆ ಇದೆ… ಒಂದು ಕಡೆ ಸುಮಲತಾ ಆದರೆ ಮತ್ತೊಂದು ಕಡೆ ನಿಖಿಲ್…. ಯಾರು ಕಣಕ್ಕೆ ಇಳಿಯುತ್ತಾರೆ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ… ಮೈತ್ರಿ ಸರ್ಕಾರ ಇರುವುದರಿಂದ ದೋಸ್ತಿಗಳ ಪೈಕಿ ಒಬ್ಬರು ಮಾತ್ರ ಸ್ಪರ್ಧಿಸುವ ಅವಕಾಶವಿದೆ… ಈ ನಡುವೆ ಕಾಂಗ್ರೆಸ್ ನಿಂದ ಟಿಕೇಟ್ ಸಿಗದೆ ಇದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತುಕೊಳ್ಳುತ್ತೇನೆ ಎನ್ನುತ್ತಿದ್ದಾರೆ…
ಆದರೆ ಇದರ ನಡುವೆ ಬಿಜೆಪಿ ಮತ್ತೆ ಆಪರೇಷನ್ ಕಮಲ ಶುರುಮಾಡಿ ಸುಮಲತಾ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಸಜ್ಜಾಗುತ್ತಿದೆ ಎನ್ನಲಾಗುತ್ತಿದೆ.. ಸುಮಲತಾ ಒಂದು ವೇಳೆ ಬಿಜೆಪಿಗೆ ಹೋದರೆ ಏನು ಮಾಡುವುದು ಎನ್ನುವುದು ದೋಸ್ತಿ ಸರ್ಕಾರಕ್ಕೆ ತಲೆ ನೋವಿನ ಪ್ರಶ್ನೆಯಾಗಿದೆ. ಬಿಜೆಪಿಯವರು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ನಟಿ ಸುಮಲತಾ ಅಂಬರೀಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರ ಬಹುತೇಕ ಜೆಡಿಎಸ್ ಗೆ ಪಕ್ಕಾ ಆಗಿರುವ ಹಿನ್ನೆಲೆ ಸುಮಲತಾ ಅವರಿಗೆ ಟಿಕೆಟ್ ಸಿಗಲ್ಲ, ಹೀಗಾಗಿ ಅವರು ಬಿಜೆಪಿ ಸೇರಲಿದ್ದು ಈ ಹಿನ್ನಲೆಯಲ್ಲಿ ಅಮಿತ್ ಶಾ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಸುಮಲತಾ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ನಟಿ ಸುಮಲತಾ ಅಂಬರೀಷ್ ಅವರು,' ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ತಮ್ಮ ಜೊತೆ ಮಾತನಾಡಿಲ್ಲ, ಬಿಜೆಪಿಯ ಯಾವ ಮುಖಂಡ ಕೂಡ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.. ಮುಂಬರುವ ದಿನಗಳಲ್ಲಿ ಸುಮಲತಾಗೆ ಕಾಂಗ್ರೆಸ್ ನಿಂದ ಟಿಕೇಟ್ ಸಿಗದ ಕಾರಣ ಬಿಜೆಪಿಗೆ ಹೋಗ್ತಾರಾ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ನಿಂತುಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ
Comments