ಇಂದು `ಕೈ' ಪ್ರಭಾವಿ ಶಾಸಕನ ರಾಜೀನಾಮೆ ಫಿಕ್ಸ್..!?

ಈಗಾಗಲೇ ದೋಸ್ತಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ಆದಂತೆ ಆಘುತ್ತಿದೆ.. ಅತೃಪ್ತ ಶಾಕಕರು ರಾಜೀನಾಮೆ ಕೊಡುತ್ತಾರೆ ಎಂಬ ಗೊಂದಲದಲ್ಲಿ ಸಮ್ಮಿಶ್ರ ಸರ್ಕಾರವಿದೆ… ಸ್ವಲ್ಪ ದಿನಗಳ ಹಿಂದೆ ಕಾಂಗ್ರೆಸ್ ನ ಅತೃಪ್ತ ಶಾಸಕರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.. ಇದೀಗ ಮತ್ತೊಬ್ಬ ಪ್ರಭಾವಿ ಶಾಸಕನ ರಾಜೀನಾಮೆ ಬಹುತೇಕ ಫಿಕ್ಸ್ ಆಗಿದೆ… ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಬಿಗ್ ಶಾಕ್ ಆಗಿದ್ದು, ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಇಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದು ಖಚಿತ ಎಂದು ಅವರ ಸಹೋದರ ರಾಮಚಂದ್ರ ಜಾಧವ್ ತಿಳಿಸಿದ್ದಾರೆ..
ಕಾಂಗ್ರೆಸ್ ನ ಅತೃಪ್ತ ಶಾಕಸರು ಒಬ್ಬರಾದಂತೆ ಒಬ್ಬರು ರಾಜೀನಾಮೆ ನೀಡಲು ಮುಂದಾಗುತ್ತಿರುವುದು ದೋಸ್ತಿ ಸರ್ಕಾರ ಶಾಕ್ ಆಗಿ ಪರಿಣಮಿಸಿದೆ… ಉಮೇಶ್ ಜಾಧವ್ ಅವರು ಕಾಂಗ್ರೆಸ್ ನ ಅತೃಪ್ತ ಶಾಸಕರಾಗಿದ್ದು, ಬಿಜೆಪಿಗೆ ಹೋಗಲು ಒತ್ತಡ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.. , ಇಂದು ಕಾಂಗ್ರೆಸ್ ಪಕ್ಷಕ್ಕೆ ಉಮೇಶ್ ಜಾಧವ್ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಉಮೇಶ್ ಜಾಧವ್ ರಾಜೀನಾಮೆ ನೀಡಲಿದ್ದು, ಮಾ. 6 ರಂದು ಕಲಬುರ್ಗಿಯಲ್ಲಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಲೋಸಸಭಾ ಚುನಾವಣೆ ಬರುವುದರೊಳಗೆ ಯಾರು ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುದೇ ಕಗ್ಗಂಟಿನ ಪ್ರಶ್ನೆಯಾದಂತಿದೆ..
Comments