CM HDK ಗೆ ತಿರುಗೇಟು ನೀಡಿದ ಸುಮಲತಾ..!! ಅವರ ಮುಂದಿನ ನಡೆಯೇನು..?

ಸದ್ಯಕ್ಕೆ ಮುಂಬರುವ ಲೋಕಸಭಾ ಚುನಾವಣೆಯ ಸುದ್ದಿಯಲ್ಲಿರುವ ಅಖಾಡ ಎಂದರೆ ಅದು ಮಂಡ್ಯ.. ದಿನದಿಂದ ದಿನಕ್ಕೆ ಮಂಡ್ಯ ಅಖಾಡ ರಣರಂಗವಾಗುತ್ತಿದೆ… ಜೆಡಿಎಸ್ ಗೆ ಭದ್ರ ಬುನಾದಿಯಾಗಿರುವ ಅಖಾಡದಲ್ಲಿ ಸ್ಪರ್ಧಿಸುವುದು ಯಾರು ಎಂಬ ಪ್ರಶ್ನೆ ಎದುರಾಗಿದೆ.. ಒಂದು ನಿಖಿಲ್ ಎಂದರೆ ಮತ್ತೊಂದು ಕಡೆ ಸುಮಲತಾ ಅಂತಾರೆ.. ಆದರೆ ಯಾರು ಎನ್ನುವುದು ಇನ್ನೂ ಕೂಡ ಕನ್ಫರ್ಮ್ ಆಗಿಲ್ಲ.. ಆಗಲೇ ಒಳಜಗಳಗಳು ಕಿತ್ತಾಟಗಳು ಪ್ರಾರಂಭವಾಗಿವೆ.
ಲೋಕಸಭಾ ಚುನಾವಣೆಯ ಮಂಡ್ಯ ಅಖಾಡವು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಅವರ ನಡುವಿನ ಜಗಳಕ್ಕೆ ಕಾರಣವಾಗಿದೆ.. ಅಂಬರೀಶ್ ಅವರು ಮೃತಪಟ್ಟ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಗೆ ಅವರ ಮೃತದೇಹವನ್ನು ತಂದವರು ಯಾರು? ಮಂಡ್ಯ ಜಿಲ್ಲೆಗೆ ಅಂಬರೀಶ್ ಕೊಡುಗೆ ಏನೂ ಇಲ್ಲದಿದ್ದರೂ ನಾನು ಕರ್ತವ್ಯ ಮೆರೆದಿದ್ದೇನೆ. ಅನುಕಂಪಕ್ಕೆ ಮರುಳಾಗದಿರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.. ಇದರಿಂದ ಬೇಸರಗೊಂಡ ಸುಮಲತಾ ಅಂಬರೀಶ್ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ… ಇದಕ್ಕೆ ತಿರುಗೇಟು ನೀಡಿರುವ ಸುಮಲತಾ, ಅಂಬರೀಶ್ ಎಂದಿಗೂ ತಾವು ಮಾಡಿದ ಕೆಲಸಗಳನ್ನು ಹೇಳಿಕೊಂಡು ತಿರುಗಿಲ್ಲ. ಅವರು ಏನೆಲ್ಲಾ ಮಾಡಿದ್ದಾರೆ ಎಂಬುದು ಜನರಿಗೇ ಗೊತ್ತಿದೆ ಎಂದು ಹೇಳಿದ್ದಾರೆ. ಒಂದು ಟಿಕೇಟ್ ಸಿಗದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
Comments