ಡಿಕೆಶಿಗೆ ಸಿಕ್ತು ಸುಪಾರಿ..!! ಕೊಟ್ಟಿದ್ದು ಯಾರು ಗೊತ್ತಾ..?

ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷದವರು ಅರ್ಹತೆಯಿರುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದರೆ ಗೆಲ್ಲುತ್ತಾರೆ ಎಂಬುದನ್ನು ಲೆಕ್ಕಚಾರ ಇಟ್ಟುಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದಾರೆ.. ಇದೇ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅದನ್ನು ತಡೆಯಲು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಸುಪಾರಿ ನೀಡಿದ್ದಾರೆಂದು ಹೇಳಲಾಗುತ್ತಿದೆ..
ಸುಮಲತಾ ರಾಜಕೀಯಕ್ಕೆ ಎಂಟ್ರಿ ಕೊಡುವುದಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎನ್ನುತ್ತಿದ್ದಾರೆ.. ಆದರೆ ದೋಸ್ತಿ ಸರ್ಕಾರದ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು… ಆದರೆ ಜೆಡಿಎಸ್ ಮಂಡ್ಯ ಭದ್ರ ಬುನಾದಿಯಿದ್ದ ಹಾಗಾಗಿ ಅಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೆ ಅಖಾಡಕ್ಕೆ ಇಳಿಸಬೇಕು ಎಂಬುದು ಒಂದುಕಡೆ ಆಗಿದೆ.. ಆದರೆ ಸುಮಲತಾ ಮಾತ್ರ ಪಟ್ಟು ಬಿಡುವ ಆಗೆ ಕಾಣುತ್ತಿಲ್ಲ… ಒಂದು ವೇಳೆ ನಾನು ಸ್ಪರ್ಧೆ ಮಾಡುವುದೇ ಅದು ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್ನುತ್ತಿದ್ದಾರೆ..
ಹಾಗಾಗಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಹೆಗಲಿಗೆ ಹಾಕಿದ್ದಾರೆ.. ಈ ವಿಚಾರವಾಗಿ ಡಿಕೆಶಿ ಅವರೊಂದಿಗೆ ದೇವೇಗೌಡರು ಸುದೀರ್ಘ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ. ಜೆಡಿಎಸ್ ನಿಂದ ನಿಖಿಲ್ ಅನ್ನು ಅಖಾಡಕ್ಕೆ ಇಳಿಸಿದರೆ ಗೆಲುವು ನಿಶ್ಚಿತ ಎನ್ನುವುದು ಜೆಡಿಎಸ್ ವರಿಷ್ಟರ ಅಭಿಪ್ರಾಯವಾಗಿದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ತಂದು ಸುಮಲತಾ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.ಒಟ್ಟಾರೆ ಸುಮಲತಾ ಗೆ ಟಿಕೇಟ್ ಸಿಗಲಿಲ್ಲ ಎಂದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
Comments