ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಇವರಿಗೆ ಟಿಕೆಟ್ ಫಿಕ್ಸ್..!!

ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷದವರು ಭರ್ಜರಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.. ಬಿಜೆಪಿಯು ಕೂಡ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಸಾಕಷ್ಟು ಮಾಸ್ಟರ್ ಫ್ಲಾನ್’ಗಳನ್ನು ಮಾಡಿಕೊಳ್ಳುತ್ತಿದೆ.. ಯಾವ ಪಕ್ಷಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂಬುದನ್ನು ತಿಳಿದು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವಿನ ಗುರಿಯೊಂದಿಗೆ ಬಿಜೆಪಿ ತನ್ನ ಪ್ರಚಾರ ಕಾರ್ಯ ನಡೆಸಲಿದ್ದು ಬೀದರ್‌ನಿಂದ ಆರಂಭವಾಗಿರುವ ಈ ಪ್ರಚಾರ ಕಾರ್ಯವನ್ನು ಚುನಾವಣೆ ಮುಗಿಯೋವರೆಗೂ ಹೀಗೆಯೇ ಮುಂದುವರೆಸಿಕೊಂಡು ಹೋಗ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ..
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ಹಾಲಿ ಸಂಸದರಿಗೆ ಈ ಬಾರಿಯೂ ಅವಕಾಶ ಸಿಗಲಿದೆ. ಈ ಬಗ್ಗೆ ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ರಾಜಕೀಯ ಪಕ್ಷದಲ್ಲಿ ಸಣ್ಣ ಪುಟ್ಟವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಇರುತ್ತೆ. ನಾವು ಎಲ್ಲರನ್ನು ಕೂಡಿಸಿ ಮಾತನಾಡಿ, ಸರಿಮಾಡಿ ಒಗ್ಗಟ್ಟಾಗಿ ಮುಂದೆ ಒಂದಾಗಿ ಹೋಗುತ್ತೇವೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಆಪರೇಶನ್ ಕಮಲದ ಪ್ರಶ್ನೇನೆ ಇಲ್ಲ ಎಂದು ಸ್ಪಷ್ಟಪಡಿಸಿದ ಯಡಿಯೂರಪ್ಪ, ಅವರೇ ಬಡಿದಾಡಿಕೊಂಡು ಸರ್ಕಾರ ಹೋಗಬಹುದೆಂದು ಜನ ನಿರೀಕ್ಷೆ ಮಾಡ್ತಿದ್ದಾರೆ ಎಂದರು. ಆಪರೇಶನ್ ಕಮಲ ಮಾಧ್ಯಮದವರು ಹುಟ್ಟು ಹಾಕಿದ್ದಷ್ಟೇ. ನಾವು 104 ಜನ ಇದ್ದೇವೆ ನಾವು ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡ್ತೇವೆ. ನಮ್ಮಿಂದ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವಿಲ್ಲ ಎಂದು ಸ್ಪಷ್ಟ ಪಡಿಸಿದರು..
Comments