ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಪುಟ್ಟರಾಜು ಹೇಳಿಕೆ..!!?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದಕ್ಕೆ ಎಲ್ಲಾ ಪಕ್ಷದವರು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.. ಇದರ ನಡುವೆ ಆಪರೇಷನ್ ಕಮಲ, ಸೀಟು ಹಂಚಿಕೆ, ಯಾವ ಕ್ಷೇತ್ರ ಯಾರಿಗೆ ಬೇಕು ಎಂಬ ಗೊಂದಲವೇ ಇನ್ನೂ ಸರಿಯಾಗಿಲ್ಲ.. ಕರ್ನಾಟಕದ ರಾಜಕೀಯದಲ್ಲಿ ಅಧಿಕಾರದ ಗದ್ದುಗೆಗಿನ ಕಾದಾಟ ಜೋರಾಗಿಯೇ ನಡೆಯುತ್ತಿದೆ.. ರಾಜಕೀಯ ಎಂಬುದು ಪಗಡೆಯಾಟ ಎಂದು ಎಲ್ಲರಿಗೂ ತಿಳಿದೆ ಇದೆ.. ಪಗಡೆಯಾಟದಲ್ಲಿ ದಾಳಗಳು ಯಾರ ಪರವಾಗಿ ಉರುಳುತ್ತವೆ ಎಂಬುದೇ ಗಂಭೀರದ ವಿಷಯ…
ಲೋಕಸಭೆ ಚುನಾವಣೆಗೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಾದರೆ ಮೈತ್ರಿಯಲ್ಲಿ ನಮಗೆ 12 ಸೀಟು ಕೊಡಬೇಕೆಂದು ಒತ್ತಡ ಮಾಡಿದ್ದೇವೆ. ಅದರಲ್ಲಿ ನಾವು ಕೇಳುವ ಮೊದಲ ಕ್ಷೇತ್ರವೇ ಮಂಡ್ಯ ಇರುತ್ತೆ ಎಂದು ಸಚಿವ ಪುಟ್ಟರಾಜು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜುರವರು ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಮೂವರು ಸಚಿವರಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭೆ ಜೆಡಿಎಸ್ ತೆಕ್ಕೆಯಲ್ಲಿದೆ. ಸುಮಲತಾ ರಾಜಕೀಯ ಭೇಟಿ ಅದು ಅವರ ವೈಯಕ್ತಿಕ ವಿಚಾರ ಎಂದು ಪುಟ್ಟರಾಜುರವರು ತಿಳಿಸಿದರು..
Comments