‘ತೆನೆಹೊತ್ತ ಪಕ್ಷ’ ಕ್ಕೆ ತಲೆನೋವಾದ ಸುಮಲತಾ..! ಜೆಡಿಎಸ್’ನ ಮುಂದಿನ ನಡೆಯೇನು..?

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ..ಮಂಡ್ಯ ಅಖಾಡ ಮಾತ್ರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.. ಸದ್ಯ ಮಂಡ್ಯ ಜೆಡಿಎಸ್ ಗೆ ಭದ್ರ ಕೋಟೆ ಎಂಬುದು ಈಗಾಗಲೇ ಸಾಭೀತಾಗಿದೆ.. ಲೊಕಸಭಾ ಉಪ ಚುನಾವಣೆಯಲ್ಲಿ ಎಲ್. ಆರ್ ಶಿವರಾಮೇಗೌಡರನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ದೇವೇಗೌಡರ ಪಕ್ಷಕ್ಕೆ ನಮ್ಮ ಬೆಂಬಲ ಅನ್ನೋದನ್ನು ತಿಳಿಸಿಕೊಟ್ಟಿದ್ದಾರೆ..
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿರಿಯ ನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ತಲೆನೋವಾಗಿ ಬಿಟ್ಟಿದ್ದಾರೆ.ಲೋಕಸಭಾ ಚುನಾವಣೆ ಘೋಷಣೆ ಆಗುವ ಮೊದಲೇ ದೇವೇಗೌಡರ ಮನೆಯ ಮೂರನೇ ತಲೆಮಾರಿನ ನಿಖಿಲ್ ಗೌಡರ ಹೆಸರು ಕೇಳಿಬರುತ್ತಿದೆ..,. ಆದರೆ ಇದೀಗ ಕಣಕ್ಕಿಳಿಯಲು ಸುಮಲತಾ ಮಾಡಿರುವ ನಿರ್ಧಾರ ಜೆಡಿಎಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.. ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ನಟಿ ಸುಮಲತಾ, ಈಗಲಾಲೇ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದರಿಂದ ಜೆಡಿಎಸ್ ಯಾವ ರೀತಿಯಾಗಿ ಸಮಸ್ಯೆಯಿಂದ ಹೊರಬರಬೇಕು ಅನ್ನೋ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಮಂಡ್ಯ ಜನತೆ ಸುಮಲತಾ ಪರ ಇರುವುದು ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ.. ಈ ಸಮಸ್ಯೆಯನ್ನು ಜೆಡಿಎಸ್ ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Comments