ಬಿಜೆಪಿಗೆ ಬಿಗ್ ಶಾಕ್: ‘ದೋಸ್ತಿ ಸರ್ಕಾರ’ಕ್ಕೆ ಕೈ ಜೋಡಿಸಿದ ಬಿಜೆಪಿ ನಾಯಕ..!!
ರಾಜಕೀಯದಲ್ಲಿ ಯಾರು ಯಾವಾಗ ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಿಲ್ಲ….. ಇವತ್ತು ಒಂದು ಪಕ್ಷದಲ್ಲಿ ಇದ್ದವರು..ನಾಳೆ ಮತ್ತೊಂದು ಪಕ್ಷದಲ್ಲಿ ಇರುತ್ತಾರೆ.. ಇದೀಗ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಶಾಕ್ ಆಗಿದ್ದು, ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಜೆ.ಡಿ. ನಾಯ್ಕ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ ಜೆ.ಡಿ. ನಾಯ್ಕ್ ಮತ್ತೆ ತವರು ಪಕ್ಷಕ್ಕೆ ಮರಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಪ್ರಚಾರವೇ ಅಸ್ತ್ರವಾಗಿದ್ದು, ದಲಿತರ ಪರ, ಹಿಂದುಳಿದವರ ಪರ ಬಿಜೆಪಿಗೆ ಒಲವು ಕಾಣುತ್ತಿಲ್ಲ... ಹೀಗಾಗಿ ಜೆ.ಡಿ.ನಾಯ್ಕ್ ಮತ್ತೆ ಪಕ್ಷಕ್ಕೆ ಬಂದಿದ್ದಾರೆ ಎಂದರು. ಅವರ ಮತ್ತೆ ಮರಳಿ ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಿದೆ ಎಂದರು. ಇದರಿಂದ ಬಿಜೆಪಿಗೆ ಕಗ್ಗಂಟಾದಂತಾಗಿದೆ.. ಯಾಕೋ ಆಪರೇಷನ ಕಮಲ ಕೂಡ ಕೈ ಹಿಡಿಯುತ್ತಿಲ್ಲ… ಯಾವಾಗ ಏನು ಆಗುತ್ತದೋ ಗೊತ್ತಿಲ್ಲ…
Comments