ಸಚಿವ ರೇವಣ್ಣಗೆ ಅವಾಜ್ ಹಾಕಿದ ಜೆಡಿಎಸ್ ಶಾಸಕ…! ಯಾರ್ ಗೊತ್ತಾ..?

ರಾಜಕೀಯದ ಒಳಜಗಳಗಳು ಆಗಿಂದಾಗೆ ಬೀದಿಗೆ ಬರುತ್ತಿವೆ… ರಾಜಕೀಯದ ಅಂದ ಮೇಲೆ ಕಾಮನ್ ಎದ್ದು ಸುಮ್ಮನಾದರೂ ರಾಜಕೀಯವನ್ನು ದೊಂಬರಾಟ ಎನ್ನುವುದು ಸಾಭೀತಾಗುತ್ತಲೆ ಇರುತ್ತದೆ..ಇದೀಗ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿರುವ ಘಟನೆ ನಡೆದಿದೆ. ಇಂದು ಹಾಸನ ಕೆಡಿಪಿ ಸಭೆಯು ನಡೆಯುತಿತ್ತು, ಈ ವೇಳೆ ಕುಡಿಯುವ ನೀರಿನ ಟ್ಯಾಂಕರ್ ಗೆ ಬಿಲ್ ಮಂಜೂರು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ..
ಬಿಲ್ ಮಂಜೂರಿಗೂ ಮುನ್ನ ರೇವಣ್ಣ ಅವರು ಮೂರನೇ ಪಾರ್ಟಿಯನ್ನು ವಿಚಾರಣೆ ಮಾಡಿ ಟ್ಯಾಂಕರ್ ಗಳಲ್ಲಿ ನೀರು ಕೊಟ್ಟು ಬಿಲ್ ಮಾಡಬೇಡಿ. ಬೋರ್ ವೆಲ್ ತೆಗೆಸಿ ಎಂದು ತಿಳಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಶಾಸಕರು, ಅಣ್ಣೋ.. ನನ್ನ ಮೇಲೆ ಅನುಮಾನ ಪಡುತ್ತಿದ್ದೀರಾ. ನಾನು 227 ಹಳ್ಳಿಗಳೀಗೆ ಟ್ಯಾಂಕರ್ ಗಳಲ್ಲಿ ನೀರು ಕೊಡಿಸಿದ್ದೀನಿ ಎಂದು ಯಾವನೋ ಹೇಳಿದ್ದು ಎಂದು ಏರು ಧ್ವನಿಯಲ್ಲೇ ಸಭೆಯಲ್ಲಿ ರೇವಣ್ಣ ಅವರನ್ನು ಪ್ರಶ್ನೆ ಮಾಡಿದರು... ಇನ್ನು ಶಿವಲಿಂಗೇಗೌಡ ಮಾತಿಗೆ ಸಚಿವ ರೇವಣ್ಣ ಅವರು ಒಂದು ಬಾರಿ ತಬ್ಬಿಬ್ಬಾಗಿದ್ದಾರೆ. ಬಳಿಕ ಆಯ್ತು ಶಿವಲಿಂಗಣ್ಣ ಪಾಪ ನಾಲ್ಕು ವರ್ಷದಿಂದ ಕಷ್ಟಪಟ್ಟಿದ್ದಾನೆ ಬಿಲ್ ಕೊಡಿ ಎಂದು ಅಧಿಕಾರಿಗಳಿಗೆ ರೇವಣ್ಣ ಅವರು ಸೂಚಿಸಿದರು. ಒಟ್ಟಾರೆ ರಾಜಕೀಯದಲ್ಲಿ ಯಾರು ಯಾವಾಗ ಹೇಗೆ ಇರುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ..
Comments