ಈ ಕ್ಷೇತ್ರದ ಅಭ್ಯರ್ಥಿಯನ್ನು ಚೇಂಜ್ ಮಾಡಿ ಅಂತಿದ್ದಾರಂತೆ ದೇವೆಗೌಡರು..!! ಆ ಅಭ್ಯರ್ಥಿ ಯಾರು..ಕ್ಷೇತ್ರ ಯಾವುದು ಗೊತ್ತಾ..?

ಮುಂಬರುವ ಲೋಕಸಭಾ ಚುನಾವಣೆಗೆ ಸ್ಟ್ರಾಂಗ್ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಜೆಡಿಎಸ್ ನ ಮಾಸ್ಟರ್ ಫ್ಲಾನ್ ಆಗಿದೆ.. ಹಾಗಾಗಿ ಇದೇ ನಿಟ್ಟಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ತಕ್ಕ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದು ದೇವೆಗೌಡರ ನಿಲುವಾಗಿದೆ.. ಹಾಗಾಗಿ ಈ ಬಾರಿ ಕೆ ಹೆಚ್ ಮುನಿಯಪ್ಪ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಹಾಕಬಹುದಾ ನೋಡಿ ಎಂದು ಕಾಂಗ್ರೆಸ್ ಗೆ ಡಿಮ್ಯಾಂಡ್ ಮಾಡಿದ್ದಾರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಎನ್ನುವ ಮಾತುಗಳುರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ..
ಕೆ.ಹೆಚ್ ಮುನಿಯಪ್ಪ ಸ್ಥಳೀಯ ಮಟ್ಟದಲ್ಲಿ ಒಕ್ಕಲಿಗ ಸಮುದಾಯದ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಈ ವಿಷಯಕ್ಕಾಗಿ ಬೇರೆ ಸೂಕ್ತ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಸಲಹೆ ನೀಡಿರುವ ದೇವೆಗೌಡರು ಮುನಿಯಪ್ಪ ಬದಲು ಹೆಚ್.ಸಿ ಮಹದೇವಪ್ಪ ಅವರನ್ನು ಅಭ್ಯರ್ಥಿ ಮಾಡಬಹುದಾ ನೋಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್.ಸಿ ಮಹದೇವಪ್ಪ ಅವರಿಗೆ ಕೋಲಾರ ಟಿಕೇಟ್ ನೀಡಲು ವಿರೋಧಿಸಬಹುದು. ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಾ ಮುನಿಯಪ್ಪ ಮೇಲೆ ಗರಂ ಆಗಿದೆ ಎನ್ನಲಾಗುತ್ತಿದೆ.. ಒಟ್ಟಾರೆಯಾಗಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಗೆಲುವು ಸಾಧಿಸುವುದಷ್ಟೆ ಜೆಡಿಎಸ್ ನ ಮುಂದಿನ ಗುರಿಯಾಗಿದೆ..
Comments