ದೇವೇಗೌಡರ ಮೊಮ್ಮಕ್ಕಳು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಬೇಕು…!! ಹಾಗಾದ್ರೆ ಮಂಡ್ಯ, ಹಾಸನ ಯಾರಿಗೆ..?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದಕ್ಕೆ ಎಲ್ಲಾ ಪಕ್ಷದವರು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.. ಇದರ ನಡುವೆ ಆಪರೇಷನ್ ಕಮಲ, ಸೀಟು ಹಂಚಿಕೆ, ಯಾವ ಕ್ಷೇತ್ರ ಯಾರಿಗೆ ಬೇಕು ಎಂಬ ಗೊಂದಲವೇ ಇನ್ನೂ ಸರಿಯಾಗಿಲ್ಲ.. ಕರ್ನಾಟಕದ ರಾಜಕೀಯದಲ್ಲಿ ಅಧಿಕಾರದ ಗದ್ದುಗೆಗಿನ ಕಾದಾಟ ಜೋರಾಗಿಯೇ ನಡೆಯುತ್ತಿದೆ.. ರಾಜಕೀಯ ಎಂಬುದು ಪಗಡೆಯಾಟ ಎಂದು ಎಲ್ಲರಿಗೂ ತಿಳಿದೆ ಇದೆ.. ಪಗಡೆಯಾಟದಲ್ಲಿ ದಾಳಗಳು ಯಾರ ಪರವಾಗಿ ಉರುಳುತ್ತವೆ ಎಂಬುದೇ ಗಂಭೀರದ ವಿಷಯ… ಇದೆಲ್ಲಾದರ ನಡುವೆ ಮಾಜಿ ಪ್ರಧಾನಿ ದೇವೆಗೌಡರ ರಾಜಕೀಯದ ಆಟ ಮಾತ್ರ ಯಾರಿಗೂ ತಿಳಿಯುವುದೇ ಎಲ್ಲ… ಮೊಮ್ಮಕ್ಕಳನ್ನು ರಾಜಕೀಯಕ್ಕೆ ಎಂಟ್ರಿ ಕೊಡಿಸಲು ಸಾಕಷ್ಟು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.
ಮೊಮ್ಮಕ್ಕಳ ರಾಜಕೀಯ ಎಂಟ್ರಿಯ ಉತ್ತಮ ನಿದರ್ಶನವೆಂದರೆ ಒಬ್ಬ ಮೊಮ್ಮಗ ಪ್ರಜ್ವಲ್‌ನನ್ನು ಹಾಸನದಿಂದ, ಮತ್ತೊಬ್ಬ ಮೊಮ್ಮಗ ನಿಖಿಲ್‌ರನ್ನು ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆಂಬುದು. ಈಗಾಗಲೇ ಹಾಸನ ಮತ್ತು ರಾಮನಗರ ದೇವೇಗೌಡರ ಕುಟುಂಬ ಪಾಳೆಗಾರಿಕೆಗೆ ಒಳಪಟ್ಟಿದ್ದಾಗಿದೆ. ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಅನಿತಾ ಈಗಾಗಲೇ ರಾಜಕೀಯವಾಗಿ ಅಧಿಕಾರದ ಬಿಸಿಯಲ್ಲಿದ್ದಾರೆ... ಇವರ ಜೊತೆ ಜೊತೆಯಲ್ಲಿಯೇ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಕೂಡ ರಾಜಕೀಯವಾಗಿ ಸಾಕಷ್ಟು ಒಂದಿಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ...
ಇವರಷ್ಟೇ ಸಾಲದು ಎಂಬಂತೆ ಈಗ ಪ್ರಜ್ವಲ್ ರೇವಣ್ಣ ಹಾಸನದಿಂದ, ದೇವೇಗೌಡರು ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರದಿಂದ, ನಿಖಿಲ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವುದು. ಜತೆಗೆ ಆ ಜನಾಂಗ ಇಷ್ಟವಿರಲಿ, ಇರದಿರಲಿ ಕಷ್ಟಕಾಲದಲ್ಲೆಲ್ಲ ಇವರ ಬೆನ್ನಿಗೆ ನಿಲ್ಲುತ್ತಿರುವುದು. ಹೀಗಾಗಿಯೇ ಎಲ್ಲವೂ ಇವರಿಗಿಷ್ಟ ಬಂದಂತೆ ನಡೆಯುತ್ತಿದೆ. ಹಾಗಾಗಿ ಜನ ದೇವೆಗೌಡರ ಮೊಮ್ಮಕ್ಕಳು ಉತ್ತರ ಕರ್ನಾಟಕದಿಂದ ಸ್ಪರ್ಧಿಸಬೇಕು.. ಗೊತ್ತಿರುವ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಕ್ಕಿಂತ, ಗೊತ್ತಿಲ್ಲದ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು ಎಂಬುದು ಹಲವರ ಮಾತಾಗಿದೆ.
Comments