'ನಾವು ಭಿಕ್ಷಕರು ಅಲ್ಲ' : ದೋಸ್ತಿಗಳಿಗೆ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ..! ಹೀಗೆ ಹೇಳಿದ್ಯಾಕೆ..?
ಲೋಕಸಭಾ ಚುನಾವಣೆಯ ಬೆನ್ನಲೆ ದೋಸ್ತಿ ಸರ್ಕಾರಕ್ಕೆ ಸಿಎಂ ಕುಮಾರಸ್ವಾಮಿ ಬಿಗ್ ಶಾಕ್ ಕೊಟ್ಟಿದ್ದಾರೆ..ಸೀಟಿಗಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.. ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‍ಗೆ 7 ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿಕೊಂಡಿದೆ ಎಂದು ಹೇಳಿಕೊಂಡಿದೆ.. ಮುಖ್ಯಮಂತ್ರಿ ಹೇಳಿರುವ ಪ್ರಕಾರ 5,3,7 ಕ್ಷೇತ್ರಗಳು ಎಂಬುದು ದೊಡ್ಡ ಪ್ರಶ್ನೆಯೇ ಎಂದಿದ್ದಾರೆ...
ವಿ ಆರ್ ನಾಟ್ ಎ ಬೆಗ್ಗರ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‍ಗೆ ತಿರುಗೇಟು ಕುಮಾರಸ್ವಾಮಿ ನೀಡಿದರು. ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸಂದೇಶ ನೀಡಲು ಉಭಯ ಪಕ್ಷಗಳ ನಾಯಕರು ಕೂತು ಸಮಗ್ರವಾಗಿ ಚರ್ಚೆ ಮಾಡಬೇಕಿದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಪೂರ್ವ ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಸೀಟು ಹೊಂದಾಣಿಕೆ ಬಗ್ಗೆ ತಮ್ಮೊಂದಿಗೆ ಸಮಾಲೋಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.. ಒಟ್ಟಾರೆಯಾಗಿ ಹೆಸರಿಗೆ ದೋಸ್ತಿ ಸರ್ಕಾರ ಅಂತ ಇದ್ದರೂ ಒಳಗೊಳಗೆ ಒಳಜಗಳಗಳೂ ನಡೆಯುತ್ತಿವೆ..
Comments