ನನ್ನ ಕೊಂಡೊಕೊಳ್ಳುವ ಶಕ್ತಿ ಬಿಜೆಪಿಗೆ ಇಲ್ಲ ಎಂದ ಜೆಡಿಎಸ್ ಶಾಸಕ..!! ಯಾರ್ ಗೊತ್ತಾ..?

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಪರೇಷನ್ ಕಮಲ ಜೋರಾಗಿಯೇ ನಡೆಯುತ್ತಿದೆ… ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ.. ನಾರಾಯಣಗೌಡ ತಡರಾತ್ರಿಯಷ್ಟೆ ಮುಂಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದರು. ರಾತ್ರಿ 1.10 ರ ಸುಮಾರಿಗೆ ಆಗಮಿಸಿದ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರನ್ನ ಸಚಿವ ಸಾ.ರಾ. ಮಹೇಶ್, ಶಾಸಕ ಶಿವಲಿಂಗೇಗೌಡ ಬರಮಾಡಿಕೊಂಡರು. ಈ ವೇಳೆ ಕೆಂಪೇಗೌಡ ಏರ್ಪೋಟ್ ನಲ್ಲಿ ಮಾತನಾಡಿದ ಶಾಸಕ ನಾರಾಯಣಗೌಡ, ನಾನು ಅನಾರೋಗ್ಯದ ವಿಷಯವಾಗಿ ಮುಂಬೈ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ತಿಳಿಸಿದರು.
ಯಾವದೇ ರೀತಿಯ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದು ನಾರಾಯಣ ಗೌಡರು ತಿಳಿಸಿದ್ದಾರೆ.. ಜೊತೆಗೆ ನನಗೆ ಬಿಜೆಪಿಯವರು ಸಿಎಂ ಮಾಡ್ತೀನಿ ಅಂದ್ರು ನಾನು ಬಿಜೆಪಿಗೆ ಹೋಗಲ್ಲ. ನನ್ನನ್ನು ಕೊಂಡುಕೊಳ್ಳುವ ತಾಕತ್ತು ಬಿಜೆಪಿಯವರಿಗಿಲ್ಲ. ನನಗೆ ಬಿಜೆಪಿಯ ಹತ್ತು ಜನ ಶಾಸಕರನ್ನ ಕರೆತರುವ ಕೆಪಾಸಿಟಿ ಇದೆ ಅಂತಾ ಇದೇ ಸಮಯದಲ್ಲಿ ತಿಳಿಸಿದರು. ಇನ್ನೂ ನನ್ನ ಎಲ್ಲಾ ವ್ಯವಹಾರಗಳು ಮುಂಬೈನಲ್ಲಿರುವ ಕಾರಣ ಮುಂಬೈಗೂ ನನಗೂ ನಂಟಿದೆ. ನಾನು ಮುಂಬೈನಲ್ಲಿದ್ದರೂ ಕುಮಾರಣ್ಣನ ಸಂಪರ್ಕದಲ್ಲಿದ್ದೆ ಅಂತಾ ಶಾಸಕ ನಾರಾಯಣಗೌಡರು ಸ್ಪಷ್ಟ ಪಡಿಸಿದ್ದಾರೆ. ಯಾರು ಯಾವ ಪಕ್ಷಕ್ಕೆ ಯಾವಾಗ ಹೋಗುತ್ತಾರೋ ತಿಳಿಯುವುದೇ ಇಲ್ಲ..
Comments