ಬಿಜೆಪಿಗೆ ಬಿಗ್’ಶಾಕ್ : 'ಆಪರೇಷನ್ ಕಮಲ' ಕುರಿತು ಸಿಕ್ಕಿತ್ತು ಮತ್ತೊಂದು ಸಾಕ್ಷಿ..!!
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದರ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ… ಇದರ ನಡುವೆ ಆಪರೇಷನ್ ಕಮಲದ ಮಾತು ಹೆಚ್ಚಾಗಿಯೇ ಕೇಳಿ ಬರುತ್ತಿದೆ. ಅತೃಪ್ತ ಶಾಸಕರಿಗೆ ಕೋಟಿ ಕೋಟಿ ಹಣ ಕೊಟ್ಟು ಕೊಂಡುಕೊಳ್ಳುವ ತರಾತುರಿಯಲ್ಲಿದ್ದಾರೆ.. ಇದೀಗ ಮತ್ತೊಬ್ಬ ಶಾಸಕನಿಗೆ ಈ ಸಂಚು ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೋಲಾರ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಅವರಿಗೆ ಬಿಜೆಪಿಯಿಂದ 25 ಕೋಟಿ ರೂ. ಆಫರ್ ಬಂದಿತ್ತು. ಪಕ್ಷವನ್ನು ಸೇರಿದರೆ 25 ಕೋಟಿ ರೂ. ಕೊಡುವುದಾಗಿ ಹೇಳಿ 5 ಕೋಟಿ ರೂ. ಅಡ್ವಾನ್ಸ್ ಕೂಡ ನೀಡಲಾಗಿತ್ತು ಎಂದು ತಿಳಿಸಿದ್ದಾರೆ..
ಕೋಲಾರ ಜೆಡಿಎಸ್ ಶಾಸಕ ಕೆ ಶ್ರೀನಿವಾಸ ಗೌಡ ಅವರೇ ಈ ವಿಷಯವನ್ನು ತಿಳಿಸಿದ್ದು, ಬಿಜೆಪಿ ಮುಖಂಡರಾದ ಅಶ್ವಥ್ ನಾರಾಯಣ್ ಮತ್ತು ಸಿ.ಪಿ. ಯೋಗೇಶ್ವರ್ ಮನೆಗೆ ಬಂದು ಹಣದ ಆಮಿಷ ಒಡ್ಡಿದ್ದರು ಎಂದು ತಿಳಿಸಿದ್ದಾರೆ. ಮುಂಗಡವಾಗಿ 5 ಕೋಟಿ ರೂ. ಹಣ ಕೊಟ್ಟಿದ್ದು, ಜೆಡಿಎಸ್ ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನಂತರದಲ್ಲಿ ಹಣವನ್ನು ವಾಪಸ್ ಮಾಡಿದ್ದೆ ಎಂದು ಶ್ರೀನಿವಾಸ ಗೌಡ ತಿಳಿಸಿದ್ದಾರೆ. ಹಣ ನೀಡಿದ್ದಲ್ಲದೇ, ಉಸ್ತುವಾರಿ ಸಚಿವರನ್ನಾಗಿ ಮಾಡುವ ಆಮಿಷ ಕೂಡ ನೀಡಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದಾಗ ಅವರು ವಿಷಯವನ್ನು ದೊಡ್ಡದು ಮಾಡಬಾರದು ಎಂದು ಹೇಳಿದ್ದರಿಂದ ಹಣವನ್ನು ಹಿಂದಿರುಗಿಸಿದ್ದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿರುವುದರಲ್ಲಿ ಎರಡು ಮಾತಿಲ್ಲ.
Comments