ಬಿಜೆಪಿಗೆ ಬಿಗ್ ಶಾಕ್: ಆಪರೇಷನ್ ಕಮಲದ ಸಾಕ್ಷಿಗಳನ್ನು ರಿಲೀಸ್ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ..!!

ಇಂದು ಬಜೆಟ್ ಮಂಡನೆ ಎನ್ನುವ ವಿಷಯ ಎಲ್ಲರಿಗೂ ಗೊತ್ತು..ಬಜೆಟ್ ಮಂಡನೆಗೂ ಮೊದಲೇ ಬಿಜೆಪಿ ವಿರುದ್ಧ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಶಾಕ್ ನೀಡಲು ಮುಂದಾಗಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿರುವ ಸಾಕ್ಷಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ..ಇಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸುದ್ದಿಗೋಷ್ಟಿ ಕರೆದಿದ್ದು, ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿರುವ ಸಿಡಿಯನ್ನು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ ಕಾಂಗ್ರೆಸ್-ಜೆಡಿಎಸ್ ನ ಸುಮಾರು 35 ಶಾಸಕರಿಗೆ ಕಳೆದ 6 ತಿಂಗಳಿನಿಂದ ಬಿಜೆಪಿ ಮುಖಂಡರು ಹಣ, ಸಚಿವ ಸ್ಥಾನ ಹಾಗೂ ವಿವಿಧ ರೀತಿಯ ಆಮೀಷಗಳನ್ನು ಒಡ್ಡಿದ್ದಾರೆ ಎಂಬ ಧ್ವನಿಮುದ್ರಿಕೆಯನ್ನು ಸಿಎಂ ಬಿಡುಗಡೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ… ಕುಮಾರಸ್ವಾಮಿ ಅವರು ಕಳೆದ ರಾತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಕೊಟ್ಟು ಬಂದಿದ್ದಾರೆ ಎನ್ನಲಾಗಿದ್ದು, ಆಪರೇಷನ್ ಕಮಲ ಮಾಡಿರುವುದನ್ನು ಸಾಕ್ಷಿ ಸಮೇತ ಸಿಎಂ ರಾಜ್ಯ ಮತ್ತು ರಾಷ್ಟ್ರದ ಜನತೆಯ ಮುಂದೆ ಇಡಲಿದ್ದಾರೆ ಎನ್ನಲಾಗುತ್ತಿದೆ. ಎಲ್ಲರ ನಿರೀಕ್ಷೆಯಂತೆ ಇಂದು ಬಜೆಟ್ ಮಂಡನೆಯಾಗಲಿದೆ.. ಆದರೆ ಬಜೆಟ್ ಮಂಡನೆಗೂ ಮೊದಲು ಕರೆದಿರುವ ತುರ್ತು ಸಭೆ ಹೆಚ್ಚು ಅನುಮಾನಕ್ಕೆ ಎನ್ನಲಾಗಿದೆ.
Comments