ದೋಸ್ತಿ ಸರ್ಕಾರಕ್ಕೆ ಗೆ 'ಬಿಗ್ ಶಾಕ್' ಕೊಟ್ಟ ಜೆಡಿಎಸ್ ಶಾಸಕ..!! ಯಾರ್ ಗೊತ್ತಾ..?

ದೋಸ್ತಿ ಸರ್ಕಾರ ರಚನೆಯಾದ ದಿನದಿಂದಲೂ ಕೂಡ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೆ ಇವೆ.. ಒಂದು ಕಡೆ ವಿರೋಧ ಪಕ್ಷಗಳು ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿವೆ.. ಮತ್ತೊಂದು ಕಡೆ ದೋಸ್ತ ಸರ್ಕಾರದ ಒಳಗೊಳಗೆಯೇ ಬಾರಿ ಕಲಹಗಳು ನಡೆಯುತ್ತಿವೆ.. ಇದರ ಹಿನ್ನಲೆಯಲ್ಲಿಯೇ ದೋಸ್ತಿ ಸರ್ಕಾರಕ್ಕೆ ಮತ್ತೊಂದು ಬಿಗ್ಶಾಕ್ ಆಗಿದಂತೆ ಆಗಿದೆ. ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಬಗ್ಗೆ ನಿರ್ಧರಿಸಲಿರುವ ಬಜೆಟ್ ಅಧಿವೇಶನಕ್ಕೆ ಜೆಡಿಎಸ್ ಶಾಸಕ ನಾರಾಯಣಗೌಡ ಗೈರು ಹಾಜರಾಗುವುದು ಬಹುತೇಕ ಖಚಿತವಾಗಿದೆ
ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಸಭೆಗೆ ಕಡ್ಡಾಯವಾಗಿ ಹಾಜರಾಗಲು ವಿಪ್ ಜಾರಿ ಮಾಡಲಾಗಿದೆ. ಆದರೆ, ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಯಾರ ಸಂಪರ್ಕಕ್ಕೂ ಸಿಗದೇ ಕಳೆದ 3 -4 ದಿನಗಳಿಂದ ಕಾಣೆಯಾಗಿದ್ದರು. ಅವರು ದಿಢೀರ್ ಆಗಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಫುಡ್ ಪಾಯ್ಸನ್ ನಿಂದಾಗಿ ಅನಾರೋಗ್ಯ ಉಂಟಾಗಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದ ಕಾರಣ ಬಜೆಟ್ ಅಧಿವೇಶನಕ್ಕೆ ಬರಲು ಸಾಧ್ಯವಾಗುತ್ತಿಲ್ಲ…ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾರೆ. ನಾರಾಯಣಗೌಡರ ಈ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಿದೆ.
Comments