ದೋಸ್ತಿ ಸರ್ಕಾರದ ಐವರು ಶಾಸಕರಿಂದ ರಾಜೀನಾಮೆ..? ಯಾರ್ಯಾರು ಗೊತ್ತಾ..?

ಮುಂಬರುವ ಲೋಕಸಭಾ ಚುನಾವಣಗೆ ಈಗಾಗಲೇ ಎಲ್ಲಾ ಪಕ್ಷದವರು ತಯಾರಿಯನ್ನು ನಡೆಸುತ್ತಿದ್ದಾರೆ… ಈಗಿರುವಾಗಲೇ ಶಾಸಕರ ರಾಜೀರಾಮೆ ಎಂಬ ಮಾತು ಕೇಳಿ ಬರುತ್ತಿದೆ.. ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ.. ಬುಧವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್-ಜೆಡಿಎಸ್ನ 11 ಮಂದಿ ಶಾಸಕರು ಗೈರು ಹಾಜರಾಗುವ ಮೂಲಕ ಆತಂಕ ಸೃಷ್ಟಿಸಿದೆ.. ಈ ಹಿನ್ನಲೆಯಲ್ಲಿ ಮುಂದಿನ ಹಂತದಲ್ಲಿ ಅತೃಪ್ತ ಶಾಸಕರ ಪೈಕಿ ಐವರು ಗುರುವಾರ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಬಿಜೆಪಿಯು ತನ್ನ ಕಾರ್ಯತಂತ್ರದಂತೆ ಯಶಸ್ವಿಯಾಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿತು. ಜಂಟಿ ಸದನ ಸಮಾವೇಶಗೊಂಡ 5 ನಿಮಿಷಕ್ಕೆ ಮುಕ್ತಾಯಗೊಂಡಿತು. ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡಲು ತಂದಿದ್ದ 22 ಪುಟಗಳ ಭಾಷಣದ ಪೈಕಿ ಎರಡು ಪುಟಗಳನ್ನು ಸಮರ್ಪಕವಾಗಿ ಓದಲು ಸಾಧ್ಯವಾಗದಂತೆ ಸದನದಲ್ಲಿ ಕೋಲಾಹಲಕಾರಿ ಸನ್ನಿವೇಶವನ್ನು ಬಿಜೆಪಿ ಸೃಷ್ಟಿಸಿತು., ಬಿಜೆಪಿಯತ್ತ ವಾಲಿರುವ ಕಾಂಗ್ರೆಸ್ನ ನಾಲ್ಕು ಮಂದಿ ಅತೃಪ್ತ ಶಾಸಕರಾದ ಗೋಕಾಕ್‌ನ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮೀಣದ ಬಿ.ನಾಗೇಂದ್ರ ಮತ್ತು ಚಿಂಚೋಳಿಯ ಡಾ ಉಮೇಶ್ ಜಾಧವ್ ಅವರು ಸದನಕ್ಕೆ ಗೈರು ಹಾಜರಾಗಿದ್ದು ಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ತಂದೊಡ್ಡಿತು.ಒಟ್ಟಾರೆ ಸದನಕ್ಕೆ ಹಾಜರಾಗದೇ ಕೆಲವು ಶಾಸಕರು ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡದೆ ಅದನ್ನು ಉರುಳಿಸಲು ಬಿಜೆಪಿಯಯವರ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.
Comments